ಇಸ್ಲಾಮಿಕ್ ಸ್ಟೇಟ್‌ ಸ್ಫೋಟಕಗಳಿಗೆ 20 ರಾಷ್ಟ್ರಗಳ ಕಂಪನಿಗಳ ಬಿಡಿಭಾಗಗಳು

ಗುರುವಾರ, 25 ಫೆಬ್ರವರಿ 2016 (19:44 IST)
ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳ ಸ್ಫೋಟಕಗಳಿಗೆ ಬಿಡಿಭಾಗಗಳನ್ನು ಪೂರೈಸುವುದರಲ್ಲಿ 20 ರಾಷ್ಟ್ರಗಳ ಕಂಪನಿಗಳು ಭಾಗಿಯಾಗಿವೆ ಎಂದು ಅಧ್ಯಯನವೊಂದು ಸ್ಫೋಟಕ ಮಾಹಿತಿಯನ್ನು ಹೊರಗೆಡವಿದೆ.

ಟರ್ಕಿ, ಬ್ರೆಜಿಲ್ ಮತ್ತು ಅಮೆರಿಕ ಇಸ್ಲಾಮಿಕ್ ಸ್ಟೇಟ್ ಸುಧಾರಿಕ ಸ್ಫೋಟಕ ಉಪಕರಣಗಳನ್ನು ತಯಾರಿಸಲು ಬಳಸುವ 700ಕ್ಕೂ ಹೆಚ್ಚು ಸಾಮಗ್ರಿಗಳನ್ನು ಉತ್ಪಾದಿಸುತ್ತಿವೆ ಮತ್ತು ಮಾರಾಟ ಮಾಡುತ್ತಿವೆ ಎಂದು ಐರೋಪ್ಯ ಸಂಘಟನೆ ನಿರ್ದೇಶಿತ ಅಧ್ಯಯನ ತಿಳಿಸಿದೆ. 
 
 ಇಸ್ಲಾಮಿಕ್ ಸ್ಟೇಟ್ ಇರಾಕ್ ಮತ್ತು ಸಿರಿಯಾದ ಬಹು ಭಾಗವನ್ನು ಆಕ್ರಮಿಸಿಕೊಂಡಿದ್ದು, ನ್ಯಾಟೊ ಸದಸ್ಯ ಟರ್ಕಿ ಉಭಯ ರಾಷ್ಟ್ರಗಳ ಜತೆ ಗಡಿಯನ್ನು ಹಂಚಿಕೊಂಡಿದೆ. ಕಟ್ಟಾ ಸನ್ನಿ ಉಗ್ರರಿಗೆ ಶಸ್ತ್ರಾಸ್ತ್ರಗಳ ಹರಿವನ್ನು ತಪ್ಪಿಸಲು ಟರ್ಕಿ ಭದ್ರತೆಯನ್ನು ಬಿಗಿಗೊಳಿಸಿದೆ. 

ವೆಬ್ದುನಿಯಾವನ್ನು ಓದಿ