ಬ್ರಿಟನ್‌ನ ಬಹುತೇಕ ಮಕ್ಕಳ ಪಾಲಿಗೆ ಯೇಸುಕ್ರಿಸ್ತ ಚೆಲ್ಸಿಯಾ ಫುಟ್ಬಾಲ್ ಆಟಗಾರನಂತೆ

ಶನಿವಾರ, 3 ಜನವರಿ 2015 (16:03 IST)
ಇಂಗ್ಲೆಂಡ್‌ನ 20 ಪ್ರತಿಶತ ಮಕ್ಕಳು  ಏಸು ಕ್ರಿಸ್ತ ಚೆಲ್ಸಿಯಾ ಫುಟ್ಬಾಲ್ ಆಟಗಾರ ಎಂದು ಭಾವಿಸಿದ್ದಾರೆ ಎಂದು ನೂತನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.
ಹಲವರು ಆತನೊಬ್ಬ ಗಗನಯಾತ್ರಿ ಎಂದುಕೊಂಡಿದ್ದಾರೆ ಎಂದು ಸರ್ವೇ ಫಲಿತಾಂಶ ತಿಳಿಸಿದೆ. 
 
ಬ್ರೆಂಟ್ ಕ್ರಾಸ್ ಶಾಪಿಂಗ್ ಸೆಂಟರ್ ನಡೆಸಿದ ಸಮೀಕ್ಷೆಯೊಂದರ ಭಾಗವಾಗಿ ಲಂಡನ್ ನಿವಾಸಿ ಮಕ್ಕಳಿಗೆ ಏಸು ಕ್ರಿಸ್ತ ಯಾರು ಎಂಬ ಪ್ರಶ್ನೆಯೊಂದಿಗೆ 1. ಚೆಲ್ಸಿಯಾ ಫುಟ್ಬಾಲ್  ಆಟಗಾರ 2. ದೇವರ ಮಗ 3. ಟಿವಿ ನಿರೂಪಕ 4.  d) ಎಕ್ಸ್- ಫ್ಯಾಕ್ಟರ್ ಸ್ಪರ್ಧಿ 4. ಗಗನಯಾತ್ರಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. 
 
ಡಿಸೆಂಬರ್ 25 ಸಾಂಟಾ ಕ್ಲಾಸ್ ಅವರ ಹುಟ್ಟುಹಬ್ಬ ಎಂದು ಕೆಲವರು ಅಂದುಕೊಂಡಿದ್ದರೆ, ಐದರಿಂದ 12 ವರ್ಷದ ವಯೋಮಾನದ ಮಕ್ಕಳಲ್ಲಿ ಪ್ರತಿಶತ 5ರಷ್ಟು ಮಕ್ಕಳು ಜೀಸಸ್ ದಕ್ಷಿಣ ಧ್ರುವದಲ್ಲ ಜನಿಸಿದ್ದ ಎಂದು ಅಂದುಕೊಂಡಿದ್ದಾರೆ.
 
ಮಕ್ಕಳು ಜಿಸಸ್‌ ತಾಯಿ ಚರ್ಚೊಂದರಲ್ಲಿ ಆತನಿಗೆ ಜನ್ಮ ನೀಡಿದಳು ಎಂಬುದು ಕಾಲು ಪ್ರತಿಶತ ಮಕ್ಕಳ ನಂಬಿಕೆ. ಕೆಂಪು ಮೂಗಿನ ಹಿಮಸಾರಂಗ ರುಡಾಲ್ಫ್ ಆ ಸಮಯದಲ್ಲಿತ್ತು ಎಂಬುದು 10 ಪ್ರತಿಶತ ಮಕ್ಕಳ ಅನಿಸಿಕೆ ಎಂದು ಸಮೀಕ್ಷಾ ಫಲಿತಾಂಶ ಹೇಳಿದೆ.

ವೆಬ್ದುನಿಯಾವನ್ನು ಓದಿ