2008ರ ಮಧ್ಯಭಾಗದಲ್ಲಿ ಪಡೆಗಳು ಹಿಂದಕ್ಕೆ-ರುಡ್

ಶುಕ್ರವಾರ, 30 ನವೆಂಬರ್ 2007 (17:36 IST)
ಇರಾಕ್‌ ದೇಶದಲ್ಲಿರುವ ಉಗ್ರರ ವಿರುದ್ದ ಹೋರಾಡುತ್ತಿರುವ 550 ಸೇನಾಪಡೆಗಳನ್ನು 2008ರ ಮಧ್ಯಭಾಗದಲ್ಲಿ ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಹೇಳಿದ್ದಾರೆ.

ತಾವು ಒಂದುವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಲ್ಲಿ ಇರಾಕ್‌ನಲ್ಲಿರುವ 1,500 ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಹೇಳಿದ್ದರು. ಅದರಂತೆ 2008ರ ಮಧ್ಯಭಾಗದಲ್ಲಿ ಪಡೆಗಳನ್ನು ಹಿಂದಕ್ಕೆ ತರಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ರುಡ್ ಹೇಳಿದ್ದಾರೆ.

ಆಸ್ಟೇಲಿಯಾ ಅಮೆರಿಕದ ಪ್ರಮುಖ ಮಿತ್ರದೇಶವಾಗಿದ್ದು, ಇರಾಕ್‌ಗೆ ಅಮೆರಿಕದೊಂದಿಗೆ ಪಡೆಗಳನ್ನು ಕಳುಹಿಸುವಲ್ಲಿ ಮಹತ್ತರ ಪಾತ್ರವಹಿಸಿತ್ತು.ರುಡ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಅಮೆರಿಕ ಅಧ್ಯಕ್ಷ ಜಾರ್ಜ ಬುಷ್ ಅಭಿನಂದಿಸಲು ಕರೆಮಾಡಿ ಇರಾಕ್ ಕುರಿತು ಸಂಭಾಷಿಸಲಾಗಿದೆ ಎನ್ನುವ ವರದಿಗಳನ್ನು ರುಡ್ ತಳ್ಳಿಹಾಕಿದರು.

ವೆಬ್ದುನಿಯಾವನ್ನು ಓದಿ