4 ವರ್ಷದ ಬಾಲಕನಿಗೆ ಮತ್ತೊಮ್ಮೆ ಮೇಯರ್ ಹುದ್ದೆ

ಮಂಗಳವಾರ, 6 ಆಗಸ್ಟ್ 2013 (19:14 IST)
PR
ಅಮೆರಿಕಾದ ಒಂದು ಸಣ್ಣ ನಗರವಾದ ಡೊಸೈಟ್‌ನಲ್ಲಿ ಎರಡನೇಯ ಬಾರಿ ಕೂಡ ಮುದ್ದಾದ ಮಗು ಬಾಬಿ ಟೂಫಸ್ ಮೇಯರ್ ಆಗಿ ಆಯ್ಕೆಯಾಗಿದೆ.

ಸಿನೆಸೊಟಾ ಪ್ರಾಂತ್ಯದ ಒಂದು ಸಣ್ಣ ನಗರವಾದ ಡೊಸೈಟ್‌ನಲ್ಲಿ ಪ್ರತಿವರ್ಷ ಟೆಸ್ಟ್ ಆಫ್ ಡೊಸೈಟ್ ಎನ್ನುವ ಉತ್ಸವದಲ್ಲಿ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

ಇಲ್ಲಿ ಒಂದು ಚೀಟಿಯ ಮೇಲೆ ಅಭ್ಯರ್ಥಿಯ ಹೆಸರನ್ನು ಬರೆದು ಒಂದು ಟೋಪಿಯಲ್ಲಿ ಹಾಕಬೇಕು. ಯಾವುದೇ ವ್ಯಕ್ತಿ ಒಂದು ಡಾಲರ್ ಕೊಟ್ಟು ಟೋಪಿಯಲ್ಲಿ ಹೆಸರನ್ನು ಹಾಕಬಹುದು.

ಕಳೆದ ವರ್ಷ ಈ ಮಗು ಮೂರನೇ ವಯಸ್ಸಿನಲ್ಲಿಯೆ ಚುನಾವಣೆಯಲ್ಲಿ ಜಯಗಳಿಸಿತ್ತು. ಮತ್ತು ಈ ಸಲದ ಚುನಾವಣೆಯಲೂ ಕೂಡ ಈ ಮಗು ಗೆಲುವನ್ನು ಸಾಧಿಸಿದೆ. ಈ ನಗರದಲ್ಲಿ ಕೇವಲ 20 ರಿಂದ 30 ಮನೆಗಳು ಇವೆ.

ವೆಬ್ದುನಿಯಾವನ್ನು ಓದಿ