ಏಕಾಏಕಿ ಗುಂಡಿನ ಮಳೆಗರೆದು 7 ಜನರನ್ನು ಕೊಂದ

ಶುಕ್ರವಾರ, 26 ಫೆಬ್ರವರಿ 2016 (11:37 IST)
ಅಮೆರಿಕದ ಕನ್ಸಾಸ್ ನಗರದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ನೌಕರನೊಬ್ಬ ಏಕಾಏಕಿ ಎಕೆ 47ನಿಂದ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ ಮಹಿಳೆ ಸೇರಿದಂತೆ 7 ಜನರು ದುರ್ಮರಣಕ್ಕೀಡಾಗಿದ್ದಾರೆ. 
 
ಗುರುವಾರ ಮಧ್ಯಾಹ್ನ ನಡೆದ ಘಟನೆಯಲ್ಲಿ ಸುಮಾರು 30 ಮಂದಿಗೆ ಗಾಯಗಳಾಗಿದ್ದು, ಫ್ಯಾಕ್ಟರಿಯ ಭದ್ರತಾ ಪಡೆ ಆರೋಪಿ ಸೆಡ್ರಿಕ್ ಫೋರ್ಡ್‌ನನ್ನು ಹೊಡೆದುರುಳಿಸಿದ್ದಾರೆ. ಆರೋಪಿ ಅದೇ ಫ್ಯಾಕ್ಟರಿಯಲ್ಲಿ ಪೇಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. 
 
ಮೊದಲು ಪಾರ್ಕಿಂಗ್ ಸ್ಥಳದಲ್ಲಿದ್ದ ಓರ್ವ ಮಹಿಳೆಯ ಗುಂಡು ಹಾರಿಸಿದ ಆರೋಪಿ ಬಳಿಕ ಫ್ಯಾಕ್ಟರಿ ಒಳಗೆ ಬಂದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
 
ದಾಳಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 
 
 
 

ವೆಬ್ದುನಿಯಾವನ್ನು ಓದಿ