ಎಬೋಲಾ ಕಾಯಿಲೆಯ ಭೀತಿಯಲ್ಲಿ 45,000 ಭಾರತೀಯರು

ಗುರುವಾರ, 7 ಆಗಸ್ಟ್ 2014 (16:12 IST)
ಪಶ್ಚಿಮ ಆಫ್ರಿಕಾ ರಾಷ್ಟ್ರಗಳಲ್ಲಿ ಎಬೋಲಾ ವೈರಸ್ ಹೆಮ್ಮಾರಿ ಹಾವಳಿ ಮಾಡಿರುವ ಹಿನ್ನೆಲೆಯಲ್ಲಿ ಸರ್ಕಾರ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಪಶ್ಚಿಮ ಆಫ್ರಿಕಾ ರಾಷ್ಟ್ರಗಳಿಂದ ಬರುವ ಪ್ರಯಾಣಿಕರ ಪರೀಕ್ಷೆ ಮತ್ತು ತಪಾಸಣೆ ಕೂಡ ಇದರಲ್ಲಿ ಸೇರಿದೆ. ಪ್ರಸಕ್ತ ಎಬೋಲಾ ವೈರಸ್‌ ಪೀಡಿತವಾದ ರಾಷ್ಟ್ರಗಳಲ್ಲಿ ಸರಿಸುಮಾರು 45,000 ಭಾರತೀಯರು ಇದ್ದಾರೆ.

ಎಬೋಲಾ ಪೀಡಿತ ರಾಷ್ಟ್ರಗಳಿಗೆ ಪ್ರಯಾಣ ಮಾಡದಂತೆ ಸರ್ಕಾರ ಜನರಿಗೆ ತಿಳಿಸಿದ್ದು, ಆ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹದಗೆಟ್ಟರೆ, ಅಲ್ಲಿ ನೆಲೆಸಿರುವ ಭಾರತೀಯರು ಪುನಃ ಭಾರತಕ್ಕೆ ಹಿಂತಿರುಗುವ ಸಾಧ್ಯತೆಯಿರುತ್ತದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಸಂಸತ್ತಿಗೆ ತಿಳಿಸಿದರು. ಎಬೋಲಾ ಹೆಮ್ಮಾರಿಗೆ ಇದುವರೆಗೆ 932 ಜನರು ಬಲಿಯಾಗಿದ್ದು, ಎಬೋಲಾ ಸೋಂಕಿಗೆ ಒಳಪಟ್ಟ ಶೇ. 55ಜನರನ್ನು ಮಾರಣಾಂತಿಕ ಕಾಯಿಲೆ ಬಲಿತೆಗೆದುಕೊಂಡಿದೆ.

 ಈ ಮಾರಕ ರೋಗವು ಗೀನಿಯಾದ ನಿರ್ಜನ ಅರಣ್ಯ ಪ್ರದೇಶಗಳಲ್ಲಿ ಕಾಣಿಸಿಕೊಂಡು ಲೈಬೀರಿಯಾ, ಸಿಯಾರ ಲಿಯೋನ್ ಮತ್ತು ನೈಜೀರಿಯಾಗೆ ಹರಡಿದೆ. ವಲಸೆ ತಪಾಸಣೆಯಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಸ್ವಯಂ ಹಾಜರಾಗಬೇಕು ಎಂದು ವರ್ಧನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ