60 ವರ್ಷ ವಯಸ್ಸಿನ ವೃದ್ಧೆಗೆ ಅವಳಿ ಮಕ್ಕಳು ಹುಟ್ಟಿತು!

ಮಂಗಳವಾರ, 24 ಡಿಸೆಂಬರ್ 2013 (19:28 IST)
PR
PR
ಬೀಜಿಂಗ್: ಚೀನಾದ 60 ವರ್ಷ ವಯಸ್ಸಿನ ಮಹಿಳೆಯೊಬ್ಬಳು ತನ್ನ ಏಕಮಾತ್ರ ಪುತ್ರ ಮೃತಪಟ್ಟಾಗ, ಮತ್ತೆ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳನ್ನು ಪಡೆದ ಅಪರೂಪದ ಘಟನೆ ವರದಿಯಾಗಿದೆ. ಇದರಿಂದ ಮಗುವಿಗೆ ಜನನ ನೀಡಿದ ಅತ್ಯಂತ ಹಿರಿಯ ವಯಸ್ಸಿನ ಮಹಿಳೆ ಎಂಬ ಹೆಸರು ಪಡೆದಿದ್ದಾರೆ. ಒಂದು ಮಗುವಿನ ನೀತಿ ಅನುಸರಿಸಿರುವ ಚೀನಾದಲ್ಲಿ ಇದು ಅತ್ಯಂತ ಅಸಾಮಾನ್ಯ ಸಂಗತಿಯಾಗಿದೆ.63 ವರ್ಷ ವಯಸ್ಸಿನ ಶೇಂಗ್ ಹೈಲಿನ್ ತನ್ನ 20 ರ ವಯಸ್ಸಿನ ಪುತ್ರಿಯನ್ನು ಆಕಸ್ಮಿಕ ವಿಷಕಾರಿ ಅನಿಲದ ಪ್ರಕರಣದಲ್ಲಿ ಕಳೆದುಕೊಂಡಿದ್ದರು.ಒಂಟಿತನದಿಂದ ದೂರಹೋಗಲು, ನನ್ನ ಇಳಿವಯಸ್ಸಿನಲ್ಲಿ ಮಗುವನ್ನು ಪಡೆಯಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

ವೃದ್ದೆ ಮತ್ತು ಪತಿಗೆ ವೀಟ್ರೋ ಗರ್ಭದಾರಣೆ ಚಿಕಿತ್ಸೆ ನೀಡಲು ಹೆಫೈ ನಗರದ ಮಿಲಿಟರಿ ಆಸ್ಪತ್ರೆ ನಿರ್ಧರಿಸಿತು. ವೀಟ್ರೋ ಗರ್ಭದಾರಣೆ ಎಂದರೆ ದೇಹದ ಹೊರಗೆ ಪ್ರಯೋಗಾಲಯದಲ್ಲಿ ವೀರ್ಯಾಣು ಮತ್ತು ಅಂಡಾಣುವಿನ ಸಂಯೋಜನೆಯಿಂದ ಮಗುವನ್ನು ಬೆಳೆಸುವುದಾಗಿದೆ.

ವೆಬ್ದುನಿಯಾವನ್ನು ಓದಿ