61.1 ಕೋಟಿ ರೂಪಾಯಿಗಳ ಜಗತ್ತಿನ ಅತ್ಯಂತ ದುಬಾರಿ ’ಬ್ರಾ’.!

ಸೋಮವಾರ, 31 ಮಾರ್ಚ್ 2014 (18:53 IST)
ಮಹಿಳೆಯರ ’ಬ್ರಾ’ಗೆ ಇಷ್ಟೋಂದು ಡಿಮ್ಯಾಂಡ್ ಇದ್ಯಾ ಅಂತ ಪುರುಷರು ಅಚ್ಚರಿಗೊಳ್ಳುವಂತಹ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ರೂಪದರ್ಶಿಯೊಬ್ಬಳು ಉಟ್ಟು ತೋರಿಸಿದ ವಿಶೇಷ ಬ್ರಾ ಒಂದಕ್ಕೆ ಬರೋಬ್ಬರಿ 61.1 ಕೋಟಿ ರೂಪಾಯಿ ಇದೆ ಕಣ್ರಿ.. ಈ ಬ್ರಾ ಜಗತ್ತಿನ ಅತ್ಯಂತ ದುಬಾರಿ ಬ್ರಾ ಆಗಿದ್ದು, ಚಿನ್ನ, ವಜ್ರಗಳಿಂದ ಈ ಬ್ರಾವನ್ನು ಮಾಡಲಾಗಿದೆ.

61.1 ಕೋಟಿ ರೂಪಾಯಿಯ ಈ ವಿಶೇಷ ದುಬಾರಿ ಬ್ರಾವನ್ನು ನಾನೂ ಒಮ್ಮೆ ತೊಟ್ಟು ನೋಡಬೇಕು ಅಂತ ಹೆಣ್ಣುಮಕ್ಕಳು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದಾರೆ. ಆದ್ರೆ ಇಂತ ಬ್ರಾ ಯಾಕಪ್ಪಾ ತಯಾರಿಸಿದ್ರು ನಮ್ಮ ಜೇಬಿಗೆ ಕತ್ತರಿ ಹಾಕೋದಕ್ಕಾ? ಅಂತ ಪುರುಷರು ಒಳಗೊಳಗೇ ಗೊಣಗುತ್ತಿದ್ದಾರೆ.

ಅಮೂಲ್ಯವಾದ ಮುತ್ತು ರತ್ನಗಳನ್ನು, ವಜ್ರದ ಹರಳುಗಳನ್ನು ಈ ಬ್ರಾ ನಲ್ಲಿ ಬಳಸಲಾಗಿದ್ದು, ಚಿನ್ನವನ್ನು ಕೂಡ ಇದರಲ್ಲಿ ಬಳಸಲಾಗಿದೆ. ಇಂತಹ ದುಬಾರಿ ಬೆಲೆಯ ಬ್ರಾ ತಯಾರಿಸಿದ್ದು, ಸ್ವಿಟ್ಜರ್‌ಲ್ಯಾಂಡಿನ ಪ್ರತಿಷ್ಟಿತ ಆಭರಣ ತಯಾರಿಕಾ ಸಂಸ್ಥೆ ಮವ್‌ಅವಾಡ್‌.

ಸ್ವಿಟ್ಜರ್‌ಲ್ಯಾಂಡಿನ ಈ ದುಬಾರಿ ಬ್ರಾವನ್ನು ರೂಪದರ್ಶಿಯೊಬ್ಬಳು ತೊಟ್ಟು ಸೊಂಟ ಬಳುಕಿಸಿ ದೇಹ ಕುಲುಕಿಸಿ ಬರುತ್ತಿದ್ರೆ, ಜನರ ಕಣ್ಣೆಲ್ಲಾ ಆಕೆಯ ಎದೆಯ ಮೇಲೆ ಇತ್ತು ಎಂಬುದು ಗಮನಾರ್ಹ..!

ವೆಬ್ದುನಿಯಾವನ್ನು ಓದಿ