90 ಭಾರತೀಯರ ಮೇಲೆ ಪ್ರಕರಣ ದಾಖಲು

ಬುಧವಾರ, 31 ಅಕ್ಟೋಬರ್ 2007 (15:01 IST)
ಉತ್ತಮ ಸಂಬಳ ಮತ್ತು ಕೆಲಸದ ಪರಿಸ್ಥಿತಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ 90 ಭಾರತೀಯರ ಮೇಲೆ ಹಿಂಸಾಚಾರದಲ್ಲಿ ನಿರತರಾಗಿದ್ದರೆಂದು ಯುಎಇ ಪ್ರಕರಣ ದಾಖಲಿಸಿದೆ.

90 ಭಾರತೀಯರು ಸೇರಿದಂತೆ 159 ಕಾರ್ಮಿಕರ ಮೇಲೆ ಹಿಂಸಾಚಾರದಲ್ಲಿ ನಿರತವಾದ ಆರೋಪ ಹೊರಿಸಲಾಗಿದೆ ಎಂದು ಭಾರತೀಯ ರಾಜತಾಂತ್ರಿಕ ತಿಳಿಸಿದ್ದು, ಅವರ ಮೇಲೆ ಆರೋಪ ಸಾಬೀತಾದರೆ ಗಡೀಪಾರು ಮಾಡಲಾಗುವುದು ಎಂದು ಹೇಳಿದರು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಇನ್ನೂ 4000 ಜನರನ್ನು ಗಡೀಪಾರು ಮಾಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಅವರನ್ನು ಕೂಡ ಜಬಲ್ ಆಲಿ ಕಾರ್ಮಿಕ ಶಿಬಿರದಲ್ಲಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಸ್ಥಳೀಯ ಅಧಿಕಾರಿಗಳು, ಕಟ್ಟಡ ನಿರ್ಮಾಣ ಕಂಪನಿ ಮತ್ತು ಭಾರತದ ರಾಜತಾಂತ್ರಿಕ ಪ್ರತಿನಿಧಿಗಳ ನಡುವೆ ಸುದೀರ್ಘ ಮಾತುಕತೆ ಬಳಿಕ ಕಾರ್ಮಿಕರನ್ನು ಗಡೀಪಾರು ಮಾಡದಿರಲು ಯುಎಇ ನಿರ್ಧರಿಸಿದೆ ಎಂದು ಭಾರತ ರಾಜತಾಂತ್ರಿಕ ಕಚೇರಿಯ ಕಾರ್ಮಿಕ ಪ್ರತಿನಿಧಿ ಬಿ.ಎಸ್.ಮುಬಾರಕ್‌ ತಿಳಿಸಿದರು.

ವೆಬ್ದುನಿಯಾವನ್ನು ಓದಿ