ಫಿಲಿಪ್ಪೀನ್ಸ್‌ನಲ್ಲಿ ದೋಣಿ ಮುಳುಗಿ 36 ಸಾವು, 19 ಜನರು ನಾಪತ್ತೆ

ಗುರುವಾರ, 2 ಜುಲೈ 2015 (17:52 IST)
ಕೇಂದ್ರ ಫಿಲಿಪ್ಪೀನ್ಸ್‌ನಲ್ಲಿ 173 ಜನರಿದ್ದ ದೋಣಿಯೊಂದು ಗುರುವಾರ ಮುಳುಗಿದ್ದರಿಂದ 36 ಜನರು ಸತ್ತಿದ್ದಾರೆ ಮತ್ತು 19 ಜನರು ಕಾಣೆಯಾಗಿದ್ದಾರೆ. ಕಿಮ್ ನಿರ್ವಾಣಾ ದೋಣಿ ಓರ್ಮಾಕ್ ಮಧ್ಯ ನಗರದಿಂದ ಕಾಮೋಟ್ಸ್ ದ್ವೀಪಕ್ಕೆ ತೆರಳುತ್ತಿದ್ದಾಗ ತಲೆಕೆಳಗಾಯಿತು ಎಂದು ಮನಿಲಾದಲ್ಲಿ ಕೋಸ್ಟ್ ಗಾರ್ಡ್ ಕಚೇರಿ ತಿಳಿಸಿದೆ.
 
118 ಜನರನ್ನು ಕೇಂದ್ರ ಲೈಟ್ ದ್ವೀಪದ ಓರ್ಮೋಕ್ ನಗರದಲ್ಲಿ ರಕ್ಷಿಸಲಾಗಿದ್ದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.  ಕಳಪೆ ನಿರ್ವಹಣೆಯ, ಸಡಿಲ ನಿಯಂತ್ರಣದ ದೋಣಿಗಳು ದ್ವೀಪಪ್ರದೇಶಗಳ ಬೆನ್ನೆಲುಬಾಗಿದೆ.
 
ಆದರೆ ಇದರಿಂದ ಆಗಾಗ್ಗೆ ದೋಣಿ ದುರಂತಗಳು ಸಂಭವಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ನೂರಾರು ಜನರನ್ನು ಬಲಿತೆಗೆದುಕೊಂಡಿದೆ. 1987ರಲ್ಲಿ ಡೋನಾ ಪಾಜ್ ದೋಣಿ ತೈಲ ಟ್ಯಾಂಕರ್‌ವೊಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ 4300 ಜನರು ಸಾವನ್ನಪ್ಪಿದ್ದರು. 

ವೆಬ್ದುನಿಯಾವನ್ನು ಓದಿ