ಪತ್ನಿಯನ್ನು ಕೊಲೆ ಮಾಡಿ ಫೇಸ್‌ಬುಕ್‌ನಲ್ಲಿ ಶವದ ಚಿತ್ರ ಪೋಸ್ಟ್ ಮಾಡಿದ ಪತಿ ಜೈಲುಪಾಲು

ಗುರುವಾರ, 26 ನವೆಂಬರ್ 2015 (17:50 IST)
ತನ್ನ ಪತ್ನಿಯನ್ನು ಹತ್ಯೆ ಮಾಡಿ ಅವಳ ರಕ್ತಲೇಪಿದ ದೇಹದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಫ್ಲೋರಿಡಾದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿ ಜೈಲು ಪಾಲಾಗಿದ್ದಾನೆ. ಸ್ವಯಂರಕ್ಷಣೆಗಾಗಿ ತಾನು ಅವಳಿಗೆ 8 ಬಾರಿ ಗುಂಡು ಹಾರಿಸಿದೆ ಎಂದು ನ್ಯಾಯಾಧೀಶಕರಿಗೆ ಮನವರಿಕೆ ಮಾಡುವಲ್ಲಿ ಅವನು ವಿಫಲನಾದ.

 ಮಿಯಾಮಿಯ ಮನೆಯೊಂದರಲ್ಲಿ 27 ವರ್ಷದ ಜೆನ್ನಿಫರ್ ಅಲ್ಫೋನ್ಸೋನನ್ನು ಕೊಂದಿರುವುದು ಡೆರೆಕ್ ಮೆಡಿನಾ ವಿಚಾರಣೆಯಲ್ಲಿ ಸಾಬೀತಾಯಿತು.  ಪತ್ನಿ ಜತೆ ಜಗಳದಲ್ಲಿ ಚಾಕುವಿನಿಂದ ಆಕೆ ತಿವಿಯಲು ಬಂದಾಗ ತಾನು ಗುಂಡು ಹಾರಿಸಿದ್ದಾಗಿ ವಿಡಿಯೋಟೇಪ್ ಹೇಳಿಕೆಯನ್ನು ಮೆಡಿನಾ ಪೊಲೀಸರಿಗೆ ನೀಡಿದ್ದ. 
 
 ಅಲ್ಫೋನ್ಸೊ ತನ್ನನ್ನು ತ್ಯಜಿಸಿದರೆ ಕೊಲ್ಲುವುದಾಗಿ ಮೆಡಿನಾ ಶಪಥ ಮಾಡಿದ್ದಾನೆಂದೂ ಅಲ್ಫೋನ್ಸೋ ತನ್ನ ಸ್ನೇಹಿತೆಯರಿಗೆ ಹೇಳಿದ್ದನ್ನು ಪ್ರಾಸಿಕ್ಯೂಟರ್‌ಗಳು ಸಾಕ್ಷ್ಯವನ್ನಾಗಿ ನೀಡಿದರು.  6 ಅಡಿ ಉದ್ದ ಮತ್ತು 200 ಪೌಂಡ್ ತೂಕದ ಮೆಡಿನಾ ಸುಲಭವಾಗಿ 5. 6 ಅಡಿ ಉದ್ದದ ಅಲ್ಫೋನ್ಸೊಗೆ ಶೂಟ್ ಮಾಡದೇ ಸುಲಭವಾಗಿ ತಪ್ಪಿಸಿಕೊಳ್ಳಬಹುದಿತ್ತು ಎಂದು ಗಮನಸೆಳೆದರು. 
 
ಮೆಡಿನಾಗೆ ಕೈಕೋಳ ತೊಡಿಸಿ ಜೈಲಿಗೆ ಒಯ್ದಾಗ ಅವನ ಮುಖದಲ್ಲಿ ಪಶ್ಚಾತ್ತಾಪದ ಲಕ್ಷಣ ಕಂಡುಬಂದಿರಲಿಲ್ಲ.  ಎರಡನೇ ಡಿಗ್ರಿ ಹತ್ಯೆಯ ಶಿಕ್ಷೆಯೆಂದರೆ 33 ವರ್ಷದ ಮೆಡಿನಾ 25 ವರ್ಷಗಳ ಸೆರೆವಾಸದ ಶಿಕ್ಷೆ ಅನುಭವಿಸಲಿದ್ದಾನೆ. 
 

ವೆಬ್ದುನಿಯಾವನ್ನು ಓದಿ