ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕೋಮಾ ನಾಟಕವಾಡಿದ ವಂಚಕ

ಶನಿವಾರ, 1 ನವೆಂಬರ್ 2014 (17:58 IST)
ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪಾರ್ಶ್ವವಾಯು ಪೀಡಿತನಂತೆ ಮತ್ತು ಕೆಲವು ಬಾರಿ ಕೋಮಾ ಸ್ಥಿತಿಯಲ್ಲಿದ್ದಂತೆ ನಟನೆ ಮಾಡುತ್ತಾ ಪೊಲೀಸರಿಗೆ 2 ವರ್ಷಗಳವರೆಗೆ ಚಳ್ಳೆಹಣ್ಣು ತಿನ್ನಿಸಿದ್ದ ವಂಚಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸೂಪರ್‌ಮಾರ್ಕೆಟ್‌ಗಳ ಸುತ್ತ ಕಾರು ಕಾರು ಚಾಲನೆ ಮಾಡುತ್ತಿದ್ದ ವಂಚಕ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾನೆ. 
 
ಅಲ್ಜೈಮರ್ ಕಾಯಿಲೆಯಿದ್ದ ನೆರಮನೆಯವರಿಂದ ಅಲನ್ ನೈಟ್ ಎಂಬ ವಂಚಕ 40,000 ಪೌಂಡ್ ಹಣವನ್ನು ಕದ್ದಿದ್ದ. ಪೊಲೀಸರು ತನಿಖೆ ನಡೆಸಿದಾಗ ನೈಟ್ ಪಾರ್ಶ್ವವಾಯು ಪೀಡಿತನಂತೆ ನಟಿಸುತ್ತಾ ಆಗಾಗ್ಗೆ ಕೋಮಾ ಸ್ಥಿತಿಗೆ ಹೋಗುತ್ತಿದ್ದ.
 
ಕೋರ್ಟ್ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೋಸ್ಕರ ಆಸ್ಪತ್ರೆಯೊಂದಕ್ಕೆ ಕೂಡ ಸೇರಿಕೊಂಡ. ಆದರೆ ಕಳ್ಳ ತನ್ನ ಸೂಪರ್‌ಮಾರ್ಕೆಟ್ ಕಾರ್ಡ್ ಬಳಸಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಅವನು ವಾಕಿಂಗ್ ಮತ್ತು ಕಾರುಚಾಲನೆ ಮಾಡುತ್ತಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಹಾಜರುಪಡಿಸಿದಾಗ  ವಂಚನೆ ಬೆಳಕಿಗೆ ಬಂದಿದೆ. 

ವೆಬ್ದುನಿಯಾವನ್ನು ಓದಿ