ವಿಷಯುಕ್ತ ನಾಯಿಯ ಮಾಂಸ ತಿಂದು ಮೂವರ ದಾರುಣ ಸಾವು

ಮಂಗಳವಾರ, 2 ಸೆಪ್ಟಂಬರ್ 2014 (20:27 IST)
ವಿಷಯುಕ್ತ ಬೇಯಿಸಿದ ನಾಯಿ ಮಾಂಸವನ್ನು ಸೇವಿಸಿದ ವ್ಯಕ್ತಿ ಮತ್ತು ಅವನ ಇಬ್ಬರು ಮಕ್ಕಳು ಕ್ರಾಸ್ ರಿವರ್ ಸ್ಟೇಟ್‌ನ ಒಡರೆಕೋ ಉಚೇನಿಂ ಗ್ರಾಮದಲ್ಲಿ  ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಈ ನಾಯಿ ಗ್ರಾಮಸ್ಥರಿಗೆ ಕಾಟ ಕೊಡುತ್ತಿದ್ದು, ಗ್ರಾಮದ ಕೋಳಿಗಳ ಮೊಟ್ಟೆಗಳನ್ನು ತಿನ್ನುತ್ತಿತ್ತು. 

ನಾಯಿಗೆ ವಿಷಪ್ರಾಶನ ಮಾಡಿ ಕೊಲ್ಲುವುದಕ್ಕೆ ಗ್ರಾಮಸ್ಥನೊಬ್ಬ ನಿರ್ಧರಿಸಿ,  ಕೋಳಿ ಇಟ್ಟಿದ್ದ ಮೊಟ್ಟೆಗಳಲ್ಲಿ ಗ್ಯಾಮಾಲಿನ್ 20 ಕೀಟನಾಶಕ ಬೆರೆಸಿದ್ದ. ನಾಯಿ ಮೊಟ್ಟೆಗಳನ್ನು ತಿಂದಾಗ, ಅದು ಕಾಯಿಲೆಗೆ ಬಿದ್ದು ಸಾಯುವ ಸ್ಥಿತಿಯಲ್ಲಿದ್ದಾಗ ನಾಯಿಯ ಮಾಲೀಕನಿಗೆೆ ಈ ಬಗ್ಗೆ ಅರಿವಿಲ್ಲದೇ ಅದನ್ನು ಕೊಂದು ಆಹಾರಕ್ಕೆ ಬಳಸಿದ್ದ.

ಅವನ ಕುಟುಂಬ ಮತ್ತು ನೆರೆಯವರು ನಾಯಿಯ ಮಾಂಸವನ್ನು ಅದರ ಕರುಳಿನ ಜೊತೆ ತಿಂದಿದ್ದರು. ಮಾಂಸ ತಿಂದ ಕೂಡಲೇ ಸಮೀಪದ ಆಸ್ಪತ್ರೆಯಲ್ಲಿ ನಿಧನರಾದರು.  ಇಡೀ ಗ್ರಾಮದಲ್ಲಿ ಈಗ ಶೋಕತಪ್ತ ವಾತಾವರಣ ಮೂಡಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ