ಚೀನಾದಲ್ಲಿ ಸಿಂಕ್ ಹೋಲ್ ಬಾಯಿತೆರೆದು ಐವರು ಕುಸಿದು ಬಿದ್ದರು! (ವಿಡಿಯೊ)

ಶನಿವಾರ, 29 ಆಗಸ್ಟ್ 2015 (13:58 IST)
ಈಶಾನ್ಯ ಚೀನಾದ ನಗರ ಹರ್ಬಿನ್‌ನಲ್ಲಿ ಸಿಂಕ್‍ಹೋಲ್‌ ಕುಸಿದು ಐವರು ರಂಧ್ರದೊಳಗೆ ಬಿದ್ದ ಅನಿರೀಕ್ಷಿತ ಘಟನೆ ಸಂಭವಿಸಿದೆ. ಈ ಘಟನೆಯನ್ನು ಭದ್ರತಾ ವಿಡಿಯೋ ಸೆರೆಹಿಡಿದಿದ್ದು, ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ಘಟನೆಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆಂದು ಸ್ಥಳೀಯ ಮಾಧ್ಯಮ ತಿಳಿಸಿದೆ. ಪಾದಚಾರಿಗಳು ಫುಟ್‌ಪಾತ್ ಮೇಲೆ ನಿಂತಿದ್ದಾಗ ಇದ್ದಕ್ಕಿದ್ದಂತೆ ಸಿಂಕ್ ಹೋಲ್ ಕುಸಿಯಿತು.

ದಾರಿಹೋಕರು ದುರ್ದೈವಿಗಳನ್ನುರಂಧ್ರದಿಂದ ಮೇಲಕ್ಕೆಳೆದರು. ಈ ರಂಧ್ರವು ಸುಮಾರು 10 ಅಡಿ ಆಳವಾಗಿತ್ತೆಂದು ವರದಿಗಾರರು ಹೇಳಿದ್ದಾರೆ. ಸೈಡ್‌ವಾಕ್ ದಿಢೀರನೇ ಕುಸಿಯಲು ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ. 

 
 

ವೆಬ್ದುನಿಯಾವನ್ನು ಓದಿ