ಆತ್ಮಾಹುತಿ ದಾಳಿಗೆ ಅಫ್ಘನ್ ಅಧ್ಯಕ್ಷ ಹಮೀದ್ ಕರ್ಜಾಯಿ ಸಹೋದರ ಬಲಿ

ಮಂಗಳವಾರ, 29 ಜುಲೈ 2014 (15:09 IST)
ನಗರದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಸಹೋದರ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ಚುನಾವಣೆ ಫಲಿತಾಂಶದ ಪರಿಣಾಮದಿಂದ ಆಕ್ರೋಶಗೊಂಡ ತಾಲಿಬಾನಿ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಾಹುತಿ ದಾಳಿ ನಡೆಸುತ್ತಿದ್ದಾರೆ ಎಂದು ಭಧ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
 
ಕರ್ಜಾಯಿ ಸಹೋದರ ಹಶ್ಮಿತ್ ಕರ್ಜಾಯಿ ಮನೆಗೆ ಆಗಮಿಸಿದ ಯುವಕನೊಬ್ಬ ರಮಜಾನ್ ಹಬ್ಬದ ನಿಮಿತ್ಯ ಅವರನ್ನು ಅಭಿನಂದಿಸಲು ಬಂದಿರುವುದಾಗಿ ಭದ್ರತಾ ಸಿಬ್ಬಂದಿಗೆ ಮನರಿಕೆ ಮಾಡಿದ್ದಾನೆ.
 
ಹಶ್ಮಿತ್ ಕರ್ಜಾಯಿ, ತಮ್ಮ ಮನೆಗೆ ಬಂದಿದ್ದ ಆಗುಂತಕನನ್ನು ಅಪ್ಪಿ ಅಭಿನಂದಿಸುತ್ತಿರುವಾಗ ಆತ ತನ್ನನ್ನು ತಾನು ಸ್ಪೋಟಿಸಿಕೊಂಡ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ