ಭಾರತೀಯ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರಿದ ಪಾಕಿಸ್ತಾನ

ಶನಿವಾರ, 1 ಅಕ್ಟೋಬರ್ 2016 (15:15 IST)
ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮಿರದೊಳಗೆ ಸೀಮಿತ ದಾಳಿ ನಡೆಸಿದ್ದರಿಂದ ಉಭಯ ದೇಶಗಳ ಮಧ್ಯೆ ಉದ್ರಿಕ್ತ ವಾತಾವರಣ ಉಂಟಾಗಿದೆ. ಇದೀಗ ಪಾಕಿಸ್ತಾನ, ಭಾರತದ ಬಾಲಿವುಡ್ ಸಿನೆಮಾಗಳು ಮತ್ತು ಖಾಸಗಿ ಟಿವಿ ಚಾನೆಲ್‌ಗಳಿಗೆ ನಿಷೇಧ ಹೇರಿದೆ.
 
ಪಾಕಿಸ್ತಾನ ಎಲೆಕ್ಟ್ರಾನಿಕ್ ಮೀಡಿಯಾ ರೆಗುಲೇಟರಿ ಅಥಾರಿಟಿ ಸಂಸ್ಥೆ, ದೇಶಾದ್ಯಂತ ಭಾರತೀಯ ಚಾನೆಲ್‌ಗಳ ಪ್ರಸಾರಕ್ಕೆ ನಿಷೇಧ ಹೇರಿದೆ.
 
ಭಾರತೀಯ ಟಿವಿ ಚಾನೆಲ್‌ಗಳು ಸುಳ್ಳು ಸುದ್ದಿ ಮತ್ತು ಉಹಾಪೋಹ ಸುದ್ದಿಗಳು ಹರಡಿಸುತ್ತಿವೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ, ಭಾರತೀಯ ಚಾನೆಲ್‌ಗಳಿಗೆ ನಿಷೇಧ ಹೇರಲಾಗಿದೆ ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಉಭಯ ದೇಶಗಳ ಮಧ್ಯೆ ಪರಿಸ್ಥಿತಿ ಉದ್ರಿಕ್ತಗೊಂಡಿದ್ದರಿಂದ ಪಾಕಿಸ್ತಾನದ ಥಿಯೇಟರ್‌ಗಳ ಮಾಲೀಕರು ಬಾಲಿವುಡ್ ಸಿನೆಮಾಗಳ ಪ್ರದರ್ಶನಕ್ಕೆ ನಿಷೇಧ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕಳೆದ ಗುರುವಾರದಂದು  ಇಂಡಿಯನ್ ಮೋಶನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಶನ್, ಪಾಕಿಸ್ತಾನದ ಕಲಾವಿದರಿಗೆ ನಿಷೇಧ ಹೇರಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ