ಪೇಶಾವರ ದಾಳಿಯ ನಂತರ ಇಬ್ಬರು ಉಗ್ರರಿಗೆ ಗಲ್ಲು...

ಶನಿವಾರ, 20 ಡಿಸೆಂಬರ್ 2014 (11:45 IST)
ಪೇಶಾವರದಲ್ಲಿ ನಡೆದ ಮಕ್ಕಳ ಕಗ್ಗೋಲೆಯ ನಂತರ ಪಾಕಿಸ್ತಾನ ಸರಕಾರ ಎಚ್ಚೆತ್ತುಕೊಂಡಿದ್ದು, ಜೈಲುಗಳಲ್ಲಿ ಬಂಧಿಯಾಗಿರುವ 3,000 ಆತಂಕವಾದಿಗಳನ್ನು ಗಲ್ಲುಗೇರಿಸುವ ನಿರ್ಧಾರಕ್ಕೆ ಚಾಲನೆ ನೀಡಿದೆ.  ಪಾಕ್ ಸುದ್ದಿವಾಹಿನಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪ್ರಾರಂಭಿಸಿರುವ ಪಾಕ್ ಸರಕಾರ ಅಕೀಲ್ ಅಲಿಯಾಸ್ ಡಾಕ್ಟರ್ ಉಸ್ಮಾನ್ ಮತ್ತು ಪರ್ವೇಜ್ ಮುಷರಫ್ ಅವರ ಮೇಲಿನ ದಾಳಿಕೋರ ಅರ್ಶದ್ ಮಹಮೂದ್ ಅವರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ. ಇಬ್ಬರನ್ನು ಸಹ  ಫೈಸಲಾಬಾದ್‌ನಲ್ಲಿ ನೇಣಿಗೇರಿಸಲಾಯಿತು. 
2009ರಲ್ಲಿ  ರಾವಲ್ಪಿಂಡಿಯಲ್ಲಿ  ಪಾಕಿಸ್ತಾನೀ ಸೇನೆಯ ಮುಖ್ಯ ಕಾರ್ಯಾಲಯದ ಮೇಲೆ ನಡೆದ ದಾಳಿಯ ಹಿಂದೆ ಅಕೀಲನ ಕೈವಾಡವಿತ್ತು. ಆತ ಈ ಹಿಂದೆ ಪಾಕ್ ಸೈನ್ಯದಲ್ಲಿ ಸೈನಿಕನಾಗಿ ಕೂಡ ಕಾರ್ಯ ನಿರ್ವಹಿಸಿದ್ದ. 
 
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ವಿದ್ವಾಂಸ ಅಮೀರ್ ಲಿಯಾಖತ್ ಹುಸೇನ್, "ಆತಂಕವಾದಿಗಳನ್ನು ಗಲ್ಲಿಗೇರಿಸಬೇಡಿ, ಬದಲಾಗಿ  ಸಾರ್ವಜನಿಕವಾಗಿ ಅವರ ತಲೆಯನ್ನು ಕಡಿಯಿರಿ" ಎಂದು ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ