162 ಜನರನ್ನು ಹೊತ್ತು ಸಾಗುತ್ತಿದ್ದ ಏರ್ ಏಷ್ಯಾವಿಮಾನ ನಾಪತ್ತೆ

ಭಾನುವಾರ, 28 ಡಿಸೆಂಬರ್ 2014 (12:02 IST)
162 ಜನರನ್ನು ಹೊತ್ತುಕೊಂಡು ಇಂಡೋನೇಷಿಯಾದಿಂದ ಸಿಂಗಾಪುರಕ್ಕೆ ಹೊರಟಿದ್ದ ಏರ್ ಏಷ್ಯಾ ವಿಮಾನವೊಂದು ಇಂದು ಬೆಳಿಗ್ಗೆ ನಾಪತ್ತೆಯಾಗಿದೆ. ವಿಮಾನ ಮುಂಜಾನೆ 6. 17 ಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕ ಕಡಿದುಕೊಂಡಿದೆ ಎಂದು ಮಾಹಿತಿ ಲಭಿಸಿದೆ. 
ಮಧ್ಯರಾತ್ರಿ ಸುರಬಯ ವಿಮಾನ ನಿಲ್ದಾಣದಿಂದ ಹೊರಟ ಕ್ಯೂಝಡ್8501 ಸಂಖ್ಯೆಯ ವಿಮಾನ ಭಾನುವಾರ ಬೆಳಗ್ಗೆ 8:30ಕ್ಕೆ  ಸಿಂಗಾಪುರವನ್ನು ತಲುಪಬೇಕಿತ್ತು. ಆದರೆ, ವಿಮಾನ ಏಕಾಯೇಕಿ ನಾಪತ್ತೆಯಾಗಿದೆ. ಜಕಾರ್ತ ಏರ್ ಟ್ರಾಫಿಕ್ ಕಂಟ್ರೋಲ್ ಟವರ್‌ಗೆ ಈ ವಿಮಾನದ ಸಿಗ್ನಲ್ ಕೊನೆಯ ಬಾರಿ ಸಿಕ್ಕಿದ್ದು ಬೆಳಗ್ಗಿನ ಜಾವ 6:17ಕ್ಕೆ. ಪೈಲಟ್ ಸದಾ ಸಾಗುವ ಮಾರ್ಗವನ್ನು ಬದಲಿಸಿ ಬೇರೆ ಮಾರ್ಗದಲ್ಲಿ ಸಾಗಿದ್ದ ಎಂದು ಹೇಳಲಾಗುತ್ತಿದೆ.  ವಿಮಾನದ ಸಿಬ್ಬಂದಿ ಬೇರೆ ಮಾರ್ಗದ ಬಗ್ಗೆ ಮಾಹಿತಿ ಕೇಳಿದ್ದರೆಂದು ತಿಳಿದು ಬಂದಿದೆ. ಬಳಿಕ ವಿಮಾನ ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ . 
 
ಈ ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಇಂಡೋನೇಷ್ಯನ್ನರೇ ಆಗಿದ್ದು, ಭಾರತೀಯ ಪ್ರಜೆಗಳಿಲ್ಲವೆಂದು ಖಚಿತವಾಗಿದೆ. ವಿಮಾನದಲ್ಲಿ 155 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಇದ್ದಾರೆಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ