ಹಾರುವ ಬೋನ್ಸಾಯ್ ಬೇಕಾ?

ಸೋಮವಾರ, 1 ಫೆಬ್ರವರಿ 2016 (12:17 IST)
ಬೋನ್ಸಾಯ್ ಎಂದರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಭೂಮಿಯ ಆಸರೆ ಸಿಕ್ಕಿದರೆ ಎಕರೆಗಟ್ಟಲೆ ಜಾಗ ಆಕ್ರಮಿಸುವ ಆಲ, ಅರಳಿ ಮರಗಳು ಅತೀ ಕುಬ್ಜವಾಗಿ ಕೇವಲ ಒಂದುವರೆ ಮೊಳದಷ್ಟು ಉದ್ದ ಬೆಳೆದು ಅಚ್ಚರಿ ಮೂಡಿಸುತ್ತದೆ. ಒಂದು ಸಣ್ಣ ಟ್ರೇನಲ್ಲಿ ಮಿನಿ ಉದ್ಯಾನವನ್ನೂ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಒಂದು ಬೋನ್ಸಾಯ್ ಆಲದ ಗಿಡಕ್ಕೆ ಸುಮಾರು 25,000 ಮೌಲ್ಯವಿದೆ. 

ಈ ವಿಷಯ ಈಗೇಕೆ ಅಂತೀರಾ. ಬೋನ್ಸಾಯ್ ಪ್ರಿಯರಿಗೊಂದು ಕುತೂಹಲದ ಸುದ್ದಿಯಿದೆ. ಜಪಾನಿನ ಹೊಷಿಂಚು ಎಂಬ ಸಂಸ್ಥೆ  ಗಾಳಿಯಲ್ಲಿ ತೇಲಾಡುವ ಬೋನ್ಸಾಯ್ ಆವಿಷ್ಕರಿಸಿದೆ. ಆಯಸ್ಕಾಂತೀಯ ಶಕ್ತಿಯನ್ನು ಬಳಸಿಕೊಂಡು ಈ ಪ್ರಯೋಗವನ್ನು ಮಾಡಲಾಗಿದೆ.
 
ಅದಕ್ಕೀಗ ಎಲ್ಲಿಲ್ಲದ ಬೇಡಿಕೆ ಸುರುವಾಗಿದ್ದು ಒಂದು ಗಿಡಕ್ಕೆ 200 ಡಾಲರ್ ನಿಗದಿ ಪಡಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ