ಹೈಟೆಕ್: ಗಗನದಲ್ಲೇ ಏರ್‌ಹೋಸ್ಟೆಸ್‌ಗಳ ವೇಶ್ಯಾವಾಟಿಕೆ

ಬುಧವಾರ, 28 ಜನವರಿ 2015 (15:02 IST)
ರೂಪ, ಯೌವ್ವನ, ಬಿನ್ನಾಣದಿಂದ ಕಂಗೊಳಿಸುವ ಗಗನಸಖೀಯರು ತಮ್ಮ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. 
 
ಇದರಲ್ಲೇನು ವಿಶೇಷ ಅಂತಿರಾ? ವಿಷಯ ಅದಲ್ಲ. ಜಪಾನಿನ ಗಗನಸಖೀಯರಿಗೆ ಕೈ ತುಂಬಾ ಸಂಬಳ ಸಿಗುತ್ತಿಲ್ಲವಂತೆ. ಹೀಗಾಗಿ ಪೈಲಟ್‌ಗಳ ಜತೆ ಸೆಕ್ಸ್‌ ನಡೆಸಿ ದುಡ್ಡು ಮಾಡುವ ದಂಧೆಯನ್ನು ಶುರುವಿಟ್ಟುಕೊಂಡಿದ್ದಾರೆ. ಆಕಾಶದಲ್ಲಿ ಹಾರುತ್ತಲೇ ಎಲ್ಲಾ ವ್ಯವಹಾರಗಳು ನಡೆದುಹೋಗುತ್ತಿವೆ! 
 
ಜಪಾನ್‌ ಗಗನಸಖೀಯರು ಮತ್ತು ಮೇಲ್ವಿಚಾರಕರಿಗೆ ಆರು ಲಕ್ಷ ರೂ.ವರೆಗೆ ವೇತನವನ್ನು ಕಡಿತಗೊಳಿಸಿದ್ದಾರಂತೆ. ಇದರಿಂದ ಹಣವಿಲ್ಲದೇ ಕಂಗೆಟ್ಟಿರುವ ಗಗನಸಖೀಯರು ಪೈಲಟ್‌ ಜತೆಗೆ ಸೆಕ್ಸ್‌ ನಡೆಸಿ ಹಣ ಮಾಡಲು ಆರಂಭಿಸಿದ್ದಾರೆ. 
 
ಬಬ್ಬ ಪೈಲಟ್‌ನಿಂದ ಒಂದು ಬಾರಿಗೆ 30 ಸಾವಿರದಿಂದ 45 ಸಾವಿರದ ವರೆಗೆ ಪಡೆಯುತ್ತಿದ್ದಾರೆ. 30 ವರ್ಷದ ಒಳಗಿನವಾದರೆ ಹೆಚ್ಚಿನ ಹಣದ ಬೇಡಿಕೆ ಇಡುತ್ತಿದ್ದಾರೆ. ಸಖೀಯರ ಆಯ್ಕೆಯಲ್ಲೂ ಒಂದು ವಿಧಾನವನ್ನು ರೂಢಿಸಿಕೊಂಡಿದ್ದಾರಂತೆ. 
 
ಒಬ್ಬೊಬ್ಬರಿಗೆ ಒಂದೊಂದು ನಂಬರ್‌ ನೀಡಲಾಗುತ್ತದೆ. ಪೈಲಟ್‌ಗೆ ಯಾರು ಇಷ್ಟವಾಗುತ್ತಾರೊ ಕೈ ಸನ್ನೆ ಮೂಲಕ ತೋರಿಸಿದರೆ ಸಾಕು. ಅಲ್ಲದೆ, ದುಡ್ಡಿನ ವ್ಯವಹಾರವೂ ಆಗಲೇ ನಡೆದುಹೋಗುತ್ತದೆಯಂತೆ.
 
 

ವೆಬ್ದುನಿಯಾವನ್ನು ಓದಿ