ಅಮೆರಿಕ: ಶಿವ ದೇವಾಲಯದ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು

ಭಾನುವಾರ, 1 ಮಾರ್ಚ್ 2015 (12:14 IST)
ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಶಿವ ದೇವಾಲಯದ ಮೇಲೆ ದಾಳಿ ನಡೆದ ಘಟನೆಯ ಬೆನ್ನಲ್ಲೇ ಇಲ್ಲಿನ ಕೆಂಟ್‌ನಲ್ಲಿರುವ ಹಿಂದು ದೇವಾಲಯದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
 
ಗುರುವಾರ ತಡರಾತ್ರಿ ದೇವಾಲಯದ ಕಿಟಕಿಯನ್ನು ಮುರಿದು ಹಾಕಿರುವ ದುರುಳರು, "ಫಿಯರ್‌' (ಭಯ) ಎಂದು ದೇವಾಲಯದ ಗೋಡೆಯ ಮೇಲೆ ಬಣ್ಣದಿಂದ ಬರೆದಿದ್ದಾರೆ.
 
ಭಕ್ತರು ಶುಕ್ರವಾರ ಬೆಳಗ್ಗೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಇದು ಜನಾಂಗೀಯ ದಾಳಿಯೋ ಅಥವಾ ಪಕ್ಕದಲ್ಲೇ ಇದ್ದ ಕೆಲ ಹದಿಹರೆಯದ ಉಡಾಳ ಹುಡುಗರ ಕೃತ್ಯವೋ ಎಂದು ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ದೇವಾಲಯದಲ್ಲಿ ಸಿಸಿಟೀವಿ ಕ್ಯಾಮರಾ ಇರದ ಕಾರಣ ದಾಳಿಕೋರರ ಬಗ್ಗೆ ಯಾವುದೇ ಸುಳಿವು ಗೊತ್ತಾಗಿಲ್ಲ.
 
ಇದೇ ವೇಳೆ ಇಸ್ಲಾಮಿಕ್‌ ಮುಖಂಡ ಅರ್ಸಲಾನ್‌ ಬುಖಾರಿ ಪ್ರತಿಕ್ರಿಯಿಸಿ, "ಇದು ಮುಸ್ಲಿಮರ ದೇವಾಲಯ ಎಂದು ತಿಳಿದು ದಾಳಿ ನಡೆದಿರುವ ಸಾಧ್ಯತೆ ಇದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಘಟನೆಯ ಬಗ್ಗೆ ಎಫ್ಬಿಐ ಮತ್ತು ದಿಲ್ಲಿಯ ಕೆಂಟ್‌ ಪೊಲೀಸರ ಗಮನ ಸೆಳೆಯಲಾಗಿದೆ.
 

ವೆಬ್ದುನಿಯಾವನ್ನು ಓದಿ