ಪಾಕ್ ಅಣ್ವಸ್ತ್ರಗಳನ್ನು ರಕ್ಷಿಸಲು ಅಮೆರಿಕ ಆಫ್ಘನ್‌ನಲ್ಲೇ ಉಳಿಯಬೇಕು: ಡೊನಾಲ್ಡ್ ಟ್ರಂಪ್

ಶುಕ್ರವಾರ, 4 ಮಾರ್ಚ್ 2016 (14:08 IST)
ಆಫ್ಘಾನಿಸ್ತಾನದ ಸಮೀಪದಲ್ಲೇ ಇರುವ ನೆರೆಯ ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿದ್ದು, ಅದನ್ನು ರಕ್ಷಿಸಬೇಕಾಗಿರುವುದರಿಂದ ಅಮೆರಿಕ ಸೇನೆ ಆಪ್ಘಾನಿಸ್ತಾನದಲ್ಲೇ ಉಳಿಯಬೇಕಾಗಿದೆ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ಡೋನಾಲ್ಡ್ ಟ್ರಂಪ್ ತಿಳಿಸಿದರು.

ನೀವು ಆಪ್ಘಾನಿಸ್ತಾನದಲ್ಲಿ  ಸ್ವಲ್ಪ ಕಾಲ ಉಳಿಯಬೇಕಾಗುತ್ತದೆ.  ಏಕೆಂದರೆ ನೀವು ಪಾಕಿಸ್ತಾನದ ಪಕ್ಕದಲ್ಲೇ ಇದ್ದು, ಅಲ್ಲಿ ಅಣ್ವಸ್ತ್ರಗಳಿರುವುದರಿಂದ ಅವನ್ನು ಉಗ್ರಗಾಮಿಗಳ ಕೈಗೆ ಸಿಗದಂತೆ ರಕ್ಷಣೆ ಮಾಡಬೇಕಾಗಿದೆ. ಏಕೆಂದರೆ ಅಣ್ವಸ್ತ್ರಗಳು ಆಟವನ್ನು ಬದಲಿಸುತ್ತದೆ ಎಂದು ಹೇಳಿದರು.  ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚೆಯ ಸಂದರ್ಭದಲ್ಲಿ ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. 
 
 ಕಳೆದ ವರ್ಷ ಟ್ರಂಪ್ ಪಾಕಿಸ್ತಾನವನ್ನು ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಕರೆದಿದ್ದರು. ಪಾಕಿಸ್ತಾನ ಅಣ್ವಸ್ತ್ರಗಳನ್ನು ತೊರೆಯಬೇಕೆಂದೂ ಅವರು ಹೇಳಿದ್ದರು. 
ನೀವು ಭಾರತವನ್ನು ಕೂಡ ಸೇರಿಸಿಕೊಳ್ಳಬೇಕು. ಭಾರತ ಪಾಕಿಸ್ತಾನವನ್ನು ತಡೆಯುತ್ತದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನೀಡಿದ ರೇಡಿಯೊ ಸಂದೇಶದಲ್ಲಿ ಹೇಳಿದ್ದರು.

ಜಗತ್ತಿನಲ್ಲಿ ಇರಾನ್ ಹೊರತುಪಡಿಸಿ ಅತ್ಯಂತ ಅಪಾಯಕಾರಿ ರಾಷ್ಟ್ರ ಪಾಕಿಸ್ತಾನದಲ್ಲಿ ಅಸ್ಥಿರತೆ ಉಂಟಾದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಟ್ರಂಪ್ ಉತ್ತರಿಸುತ್ತಿದ್ದರು. 
ಭಾರತಕ್ಕೆ ಅವರದ್ದೇ ಅಣ್ವಸ್ತ್ರಗಳಿದ್ದು, ಅತ್ಯಂತ ಶಕ್ತಿಶಾಲಿ ಸೇನೆ ಹೊಂದಿದೆ. ಪಾಕಿಸ್ತಾನವನ್ನು ನಿಭಾಯಿಸಲು ನಾವು ಭಾರತದ ಜತೆ ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕು ಎಂದು ಟ್ರಂಪ್ ಹೇಳಿದ್ದರು.
 

ವೆಬ್ದುನಿಯಾವನ್ನು ಓದಿ