ಕಲಾಂ ಅಗಲಿಕೆಗೆ ಒಬಾಮಾ ಸಂತಾಪ

ಬುಧವಾರ, 29 ಜುಲೈ 2015 (12:27 IST)
ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ನಿಧನಕ್ಕೆ ವಿಶ್ವವೇ ಕಣ್ಣೀರಿಡುತ್ತಿದೆ. ಕಲಾಂ ಅಗಲಿಕೆಗೆ ಖೇದ ವ್ಯಕ್ತ ಪಡಿಸಿರುವ  ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮಾ, ಎರಡು ದೇಶಗಳ ನಡುವೆ ಬಾಹ್ಯಾಕಾಶ ಯೋಜನೆಗಳ ಬೆಸುಗೆಗೆ ಕಾರಣರಾಗುವ ಮೂಲಕ ಭಾರತ- ಅಮೇರಿಕ ಸಂಬಂಧ ಬಲಗೊಳ್ಳುವಲ್ಲಿ ಕಲಾಂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

"ಒಬ್ಬ ವಿಜ್ಞಾನಿ ಮತ್ತು ರಾಜತಾಂತ್ರಿಕರಾಗಿದ್ದ ಕಲಾಂ ತಮ್ಮ ತವರಿನಲ್ಲಷ್ಟೇ ಅಲ್ಲ. ವಿದೇಶದಲ್ಲಿ ಸಹ ಅಪಾರ ಮನ್ನಣೆಯನ್ನು ಗಳಿಸಿದ್ದಾರೆ. ಭಾರತದ ಅತ್ಯಂತ ಪ್ರಮುಖ ನಾಯಕರಾಗಿದ್ದ ಕಲಾಂ ಸ್ಪೂರ್ತಿಯ ಸೆಲೆಯಾಗಿದ್ದರು. ಭಾರತಕ್ಕೆ ಅವರು ಸಲ್ಲಿಸಿದ ಕೊಡುಗೆ ಅಗಣಿತವಾದುದು", ಎಂದು ಒಬಾಮಾ ಶ್ಲಾಘಿಸಿದ್ದಾರೆ.
 
ಭಾರತದ 11 ನೇ ಅಧ್ಯಕ್ಷ ಭಾರತ-ಅಮೇರಿಕಾದ ಸಂಬಂಧಗಳ ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಅಮೇರಿಕಾದ ಜನತೆಯ ಪರವಾಗಿ, ಡಾ. ಎ. ಪಿ.ಜೆ ಅಬ್ದುಲ್ ಕಲಾಂ ನಿಧನದಿಂದ ನೊಂದಿರುವ ಭಾರತೀಯ ಜನತೆಗೆ ತೀವ್ರ ಸಂತಾಪ ವ್ಯಕ್ತ ಪಡಿಸುತ್ತಿದ್ದೇನೆ", ಎಂದು ಒಬಾಮಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ