ಜಮ್ಮುಕಾಶ್ಮಿರದಲ್ಲಿ ಹುರಿಯತ್ ನಾಯಕರ ಬಂಧನ: ಮಾನವ ಹಕ್ಕುಗಳ ಉಲ್ಲಂಘನೆ ಎಂದ ಪಾಕಿಸ್ತಾನ

ಶುಕ್ರವಾರ, 6 ನವೆಂಬರ್ 2015 (18:24 IST)
ಜಮ್ಮು ಕಾಶ್ಮಿರದಲ್ಲಿ ಹುರಿಯತ್ ನಾಯಕರನ್ನು ಬಂಧಿಸಿ ಗೃಹಬಂಧನದಲ್ಲಿಟ್ಟಿರುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನ್ ಆಕ್ರೋಶ ವ್ಯಕ್ತಪಡಿಸಿದೆ.
 
ಕೇಂದ್ರ ಸರಕಾರದ ಇಂತಹ ಪ್ರಯತ್ನಗಳು ಕಾಶ್ಮಿರಿಗಳ ಧ್ವನಿಯನ್ನು ಅಡಗಿಸುವ ಹುನ್ನಾರವಿದೆ. ಇದೊಂದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಖಾಜಿ ಖಲೀಲುಲ್ಲಾ ಹೇಳಿದ್ದಾರೆ.  
 
ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ ಮತ್ತು ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಗುಡುಗಿದ್ದಾರೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ಪ್ರತ್ಯೇಕತಾವಾದಿ ನಾಯಕರು ಜಾಮಿಯಾ ಮಸೀದಿ ಚಲೋ ಕರೆ ನೀಡಿದ ಹಿನ್ನೆಲೆಯಲ್ಲಿ, ರಾಜ್ಯದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹುರಿಯತ್ ನಾಯಕರ ಮುಕ್ತ ಸಂಚಾರಕ್ಕೆ ನಿರ್ಬಂಧ ಹೇರಿದೆ. 
 
ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸಿನ್ ಮಲಿಕ್, ಹಿರಿಯ ಹುರಿಯತ್ ನಾಯಕ ಶಬೀರ್ ಅಹ್ಮದ್ ಶಾ ಮತ್ತು ಮೀರ್‌ವೈಜ್ ಉಮರ್ ಫಾರೂಕ್ ಅವರನ್ನು ಬಂಧಿಸಿ ಗೃಹ ಬಂಧನದಲ್ಲಿಡಲಾಗಿದೆ.

ವೆಬ್ದುನಿಯಾವನ್ನು ಓದಿ