ಪೇಶಾವರ ಶಾಲಾ ದಾಳಿ ಸಮರ್ಥನೆ: ಪಾಕಿಸ್ತಾನಿ ಧರ್ಮಗುರು 'ಮುಲ್ಲಾ ಬುರ್ಕಾ 'ಗೆ ಬಂಧನದ ವಾರಂಟ್

ಶನಿವಾರ, 27 ಡಿಸೆಂಬರ್ 2014 (15:27 IST)
ಪೇಶಾವರ ಶಾಲೆಯ ಮೇಲೆ ನಡೆದ ದಾಳಿಯನ್ನು ಸಮರ್ಥಿಸಿದ, ವಿವಾದಾತ್ಮಕ ಪಾಕಿಸ್ತಾನಿ ಪಾದ್ರಿ, ಕೆಂಪು ಮಸೀದಿ ಇಮಾಮ್ ಅಬ್ದುಲ್ ಅಜೀಜ್, ಬಂಧನಕ್ಕೆ ಒತ್ತಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತನನ್ನು ಬಂಧಿಸುವಂತೆ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ. 
'ಮುಲ್ಲಾ ಬುರ್ಕಾ' ಎಂದು ಸಹ ಕರೆಯಲ್ಪಡುವ ಧರ್ಮಗುರು, ಪೇಶಾವರ ಶಾಲೆಯಲ್ಲಿ 40 ಮಕ್ಕಳ ಹತ್ಯಾಕಾಂಡವನ್ನು ನಡೆಸಿದ ತಾಲಿಬಾನ್ ಕೃತ್ಯವನ್ನು ಖಂಡಿಸಿ  ನಂತರ ಕೆಂಪು ಮಸೀದಿ ಹೊರಗೆ ಧರಣಿ ನಡೆಸಿದ ಪ್ರತಿಭಟನಾಕಾರಿಗೆ ಬೆದರಿಕೆ ಒಡ್ಡಿದ ಆರೋಪವನ್ನು ಎದುರಿಸುತ್ತಿದ್ದಾರೆ. 
 
ಸ್ಥಳೀಯ ಪಾಕ್ ಮಾಧ್ಯಮವೊಂದರ ವರದಿಯ ಪ್ರಕಾರ, ಡಿಸೆಂಬರ್ 19 ರಂದು ತಮ್ಮ ಇತ್ತೀಚಿನ ಧರ್ಮೋಪದೇಶದಲ್ಲಿ ಅವರು  " ತಾಲಿಬಾನಿಗಳು ನಮ್ಮ ಸಹೋದರರು, ಶಾಲೆಯ ಮೇಲೆ ದಾಳಿ ಅವರು ನಡೆಸಿದ ದಾಳಿ ಪ್ರತೀಕಾರದ ಕ್ರಮವಷ್ಟೇ ಎಂದು ಘೋರ ಪಾತಕವನ್ನು ಸಮರ್ಥಿಸಿಕೊಂಡಿದ್ದರು. 
 
ಈ ಹೇಳಿಕೆಗೆ ರೋಷಗೊಂಡ, ಪಾಕಿಸ್ತಾನದ ನಾಗರಿಕ ಸಮಾಜ ಆತನನ್ನು ಮರಣದಂಡನೆಗೆ ಗುರಿ ಪಡಿಸುವಂತೆ ಒತ್ತಾಯಿಸಿತ್ತು. 

ವೆಬ್ದುನಿಯಾವನ್ನು ಓದಿ