ಏಷ್ಯಾದ ಏಕತೆ ವಿಶ್ವದ ಸ್ವರೂಪ ಬದಲಾಯಿಸಲಿದೆ: ನರೇಂದ್ರ ಮೋದಿ

ಮಂಗಳವಾರ, 19 ಮೇ 2015 (15:54 IST)
ಏಷ್ಯಾ ರಾಷ್ಟ್ರಗಳ ಏಕತೆ ವಿಶ್ವಕ್ಕೆ ಹೊಸ ಸ್ವರೂಪವನ್ನು ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
 
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಆಯೋಜಿಸಲಾದ 6ನೇ ಏಷ್ಯಾ ಲೀಟರ್‌ಶಿಪ್ ಕಾನ್ಫರೆನ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, ಏಷ್ಯಾ ಖಂಡದ ರಾಷ್ಟ್ರಗಳು ಒಂದಾಗಿ ಕಾರ್ಯನಿರ್ವಹಿಸಿದಲ್ಲಿ ಅಮೆರಿಕ ಸೇರಿದಂತೆ ವಿಶ್ವಕ್ಕೆ ಹೊಸ ರೂಪವನ್ನು ನೀಡಲಿದೆ ಎಂದರು. 
 
ಏಷ್ಯಾ ರಾಷ್ಟ್ರಗಳ ಪರಸ್ಪರ ವೈಮನಸ್ಸು ಖಂಡದ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಲಿದೆ. ಸಾಮಾನ್ಯ ಕಾರ್ಯಕ್ರಮಗಳ ಜಾರಿಗೆ ಎಲ್ಲಾ ರಾಷ್ಟ್ರಗಳು ಒಂದಾಗಿ ಯುವಕರಿಗೆ ಅವಕಾಶ ನೀಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
 
ಏಷ್ಯಾದಲ್ಲಿರುವ ಪ್ರತಿಯೊಬ್ಬರು ಒಂದಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುವುದು ಅಗತ್ಯವಾಗಿದೆ. ಅಮೆರಿಕ ಮತ್ತು ಅದರ ಭದ್ರತಾ ಸಮಿತಿಯ ಸುಧಾರಣೆ ತರುವಲ್ಲಿ ಅಗತ್ಯ ಒತ್ತಡ ಹೇರಬೇಕಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ