ಬಾಗ್ದಾದಿನಲ್ಲಿ ಬಂದೂಕುಧಾರಿಗಳಿಂದ 17 ಟರ್ಕಿಗಳ ಅಪಹರಣ

ಬುಧವಾರ, 2 ಸೆಪ್ಟಂಬರ್ 2015 (18:30 IST)
ಉತ್ತರ ಬಾಗ್ದಾದ್ ಸದರ್ ನಗರ ಪ್ರದೇಶದಲ್ಲಿ ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸುತ್ತಿದ್ದ ಕಂಪನಿಯ 17 ಮಂದಿ ಟರ್ಕಿ ನೌಕರರನ್ನು ಬಂದೂಕುಧಾರಿಗಳು 
ಅಪಹರಿಸಿದ್ದಾರೆ ಎಂದು ಭದ್ರತಾ ಅಧಿಕಾರಿ ತಿಳಿಸಿದ್ದಾರೆ.  ಪಿಕ್‌ಅಪ್ ಟ್ರಕ್‌ಗಳಲ್ಲಿ ಆಗಮಿಸಿದ ಕಪ್ಪು ಬಟ್ಟೆ ಧರಿಸಿದ ಬಂದೂಕುಧಾರಿಗಳು 17 ಮಂದಿ ಟರ್ಕಿಗಳನ್ನು ಅಪಹರಿಸಿದರು. 
 
ಅಪಹರಣಕ್ಕೊಳಗಾದವರಲ್ಲಿ ಮೂವರು ಎಂಜಿನಿಯರ್‌ಗಳಿದ್ದು, ಆಡಳಿತ ಇಲಾಖೆ ನೌಕರರು ಮತ್ತು ಕಾರ್ಮಿಕರು ಕೂಡ ಇದ್ದಾರೆಂದು ಪೊಲೀಸ್ ಕರ್ನಲ್ ತಿಳಿಸಿದ್ದಾರೆ.  ಅಪಹರಣಕಾರರ ಗುರುತು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಒತ್ತೆಹಣಕ್ಕಾಗಿ ಅಪಹರಿಸುವುದು ಬಾಗ್ದಾದ್‌ನಲ್ಲಿ ಸತತ ಸಮಸ್ಯೆಯಾಗಿದೆ.
 
ಸದರ್ ನಗರವು ಸರ್ಕಾರಿ ಪರ ಶಿಯಾ ಉಗ್ರಗಾಮಿಗಳ ಭದ್ರಕೋಟೆಯಾಗಿದ್ದು, ಕಳೆದ ವರ್ಷ ಇರಾಕ್ ಪ್ರದೇಶಗಳನ್ನು ಕೈವಶ ಮಾಡಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಹೋರಾಟ ಮಾಡುತ್ತಿರುವುದರಿಂದ ರಾಜಕೀಯ ಉದ್ದೇಶ ಕೂಡ ಸಾಧ್ಯವಿರಬಹುದೆಂದು ಹೇಳಲಾಗಿದೆ. ಟರ್ಕಿಯ ರಾಜಧಾನಿ ಅಂಕಾರಾ ಐಎಸ್ ಜತೆ ಸಾಮೀಪ್ಯ ಹೊಂದಿದ್ದು, ಜಿಹಾದಿ ಗುಂಪಿಗೆ ನೆರವಾಗುತ್ತಿದೆ ಎಂದು ಆರೋಪಿಸಲಾಗಿದೆ. 
 

ವೆಬ್ದುನಿಯಾವನ್ನು ಓದಿ