ಪಟಾಕಿ ಮಾರುಕಟ್ಟೆಯಲ್ಲಿ ಅಗ್ನಿದುರಂತ; 30 ಸಾವು

ಬುಧವಾರ, 21 ಡಿಸೆಂಬರ್ 2016 (08:58 IST)
ಉತ್ತರ ಮೆಕ್ಸಿಕೋದ ಟಲ್ಟೆಪಕ್‌ನಲ್ಲಿ ಮಂಗಳವಾರ ಭೀಕರ ಅಗ್ನಿದುರಂತ ಸಂಭವಿಸಿದ್ದು 30 ಜನರು ಸತ್ತು 72ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 
ಸ್ಯಾನ್ ಪ್ಯಾಬ್ಲಿಟೋದ ಪಟಾಕಿ ಮಾರುಕಟ್ಟೆಯಲ್ಲಿ ಈ ದುರಂತ ನಡೆದಿದ್ದು ಭೀಕರ ಅಗ್ನಿ ಅನಾಹುತ ನಡೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಮೆಕ್ಸಿಕೋ ಸಿಟಿಯ ಉತ್ತರಕ್ಕೆ ಸುಮಾರು 40 ಕೀಲೋಮೀಟರ್ ದೂರದಲ್ಲಿ ಈ ಘಟನೆ ಸಂಭವಿಸಿದೆ. 
 
ಕೋಟ್ಯಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ.
 
ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಘಟನೆಗೆ ನೈಜ ಕಾರಣವನೆಂದು ತನಿಖೆಯ ಬಳಿಕವಷ್ಟೇ ತಿಳಿದು ಬರಲಿದೆ. ಮಾರುಕಟ್ಟೆ ಸಾಕರ್ ಕ್ರೀಡಾಂಗಣದಷ್ಟು ದೊಡ್ಡದಿತ್ತು ಎಂದು ತಿಳಿದು ಬಂದಿದೆ.
 

ವೆಬ್ದುನಿಯಾವನ್ನು ಓದಿ