ನಾಜಿಗಳಿಗಿಂತ ಐಎಸ್ ಉಗ್ರರು ಕ್ರೂರಿಗಳು: ಟೋನಿ ಅಬಾಟ್

ಗುರುವಾರ, 3 ಸೆಪ್ಟಂಬರ್ 2015 (16:35 IST)
ಇರಾಕ್ ಮತ್ತು ಸಿರಿಯಾದಲ್ಲಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ನಾಜಿಗಳಿಗಿಂತ ಕ್ರೂರಿಗಳು ಎಂಬ ಆಸ್ಟ್ರೇಲಿಯಾದ ಪ್ರದಾನಮಂತ್ರಿ ಟೋನಿ ಅಬಾಟ್ ಹೇಳಿಕೆಯನ್ನು ಯಹೂದಿಗಳ ಗುಂಪು ತರಾಟೆಗೆ ತೆಗೆದುಕೊಂಡಿದೆ.  ವಿಶ್ವಸಂಸ್ಥೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿ ಐಎಸ್ ಮೇಲೆ ವೈಮಾನಿಕ ದಾಳಿಯನ್ನು ವಿಸ್ತರಿಸುವ ಕುರಿತು ಆಸ್ಟ್ರೇಲಿಯಾದ ಮುಖಂಡ ಪರಿಶೀಲನೆ ಮಾಡುತ್ತಿದ್ದು,  ಜಿಹಾದಿ ಸಂಘಟನೆ ಕ್ರಮ ಹೇಳಿಕೊಳ್ಳಲಾಗದ ಕೆಡುಕು ಮತ್ತು ಮಧ್ಯಕಾಲೀನ ಕ್ರೌರ್ಯ ಎಂದು ಅಬಾಟ್ ಹೇಳಿದ್ದರು. 

ನಾಜಿಗಳು ಕೂಡ ಭಯಾನಕ ಪಾಪ ಎಸಗಿದರು. ಆದರೆ ಅದನ್ನು ಮುಚ್ಚಿಡುವಷ್ಟು ನಾಚಿಕೆಯ ಪ್ರಜ್ಞೆಯಿತ್ತು. ಆದರೆ ಈ ಜನರು ತಮ್ಮ ಕ್ರೌರ್ಯವನ್ನು ಹೆಮ್ಮೆಯಿಂದ ತೋರಿಸುತ್ತಾರೆ ಎಂದುು ಅಬಾಟ್ ಸಿಡ್ನಿ ವಾಣಿಜ್ಯ ರೇಡಿಯೊ ಕೇಂದ್ರಕ್ಕೆ ತಿಳಿಸಿದರು. 
 
ಅಬಾಟ್ ಪ್ರತಿಕ್ರಿಯೆಗೆ ಆಸ್ಟ್ರೇಲಿಯನ್ ಯಹೂದಿಗಳನ್ನು ಪ್ರತಿನಿಧಿಸುವ ಸಂಸ್ಥೆಯ ಎಕ್ಸಿಕ್ಯೂಟಿವ್ ಮಂಡಳಿ ಮುಖ್ಯಸ್ಥ ರಾಬರ್ಟ್ ಗೂಟ್ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. 
ಐಎಸ್ ಅಪರಾಧಗಳು ಭಯಾನಕವಾಗಿದೆ.ಆದರೆ ಲಕ್ಷಾಂತರ ಜನರನ್ನು ವ್ಯವಸ್ಥಿತವಾಗಿ ಕೊಂದ, ಸಾಮೂಹಿಕ ಹತ್ಯೆಗೆ ಮರಣ ಶಿಬಿರಗಳನ್ನು ನಿರ್ಮಿಸಿದ ನಾಜಿಗಳಿಗೆ ಹೋಲಿಕೆಮಾಡಲಾಗುವುದಿಲ್ಲ ಎಂದು ಗೂಟ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ