ಓಡುವ, ಜಂಪ್ ಮಾಡುವ ರೋಬೋಟ್ ನೋಡಿ ಒಬಾಮಾಗೆ ಅಚ್ಚರಿ

ಗುರುವಾರ, 24 ಏಪ್ರಿಲ್ 2014 (18:27 IST)
ಜಪಾನ್‌ನ ಹೊಚ್ಚ ಹೊಸ ಕ್ರೀಡಾಳುವೊಬ್ಬರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಇಂದು ಭೇಟಿ ಮಾಡಿದರು. ಈ ಕ್ರೀಡಾಪಟು ಓಡುತ್ತದೆ, ಜಂಪ್ ಮಾಡುತ್ತದೆ. ಫುಟ್ಬಾಲ್ ಕಿಕ್ ಮಾಡುತ್ತದೆ. ಇದೊಂದು ಮಾನವರೂಪದ ರೊಬೋಟ್ ಆಗಿದ್ದು, ಹೊಂಡಾ ಕಂಪನಿ ಅಭಿವೃದ್ಧಿಪಡಿಸಿದ ರೋಬೋಟ್ ನೋಡಿ ಅಚ್ಚರಿಗೊಂಡಿದ್ದಾರೆ.

10 ವರ್ಷ ವಯಸ್ಸಿನ ಬಾಲಕನ ಗಾತ್ರದಲ್ಲಿರುವ ಈ ರೋಬೊಟ್ ಗಗಯಾನಿಯ ಸೂಟ್‌ನಲ್ಲಿದ್ದು, ಟೋಕಿಯೋದ ನ್ಯಾಷನಲ್ ಮ್ಯೂಸಿಯಂನಲ್ಲಿ ಒಬಾಮಾಗೆ ಈ ರೋಬೋಟ್ ದರ್ಶನವಾಯಿತು.
 
ರೋಬೋಟ್ ಒಬಾಮಾರನ್ನು ನೋಡಿದ ಕೂಡಲೇ ಇಟೀಸ್ ನೈಸ್ ಟು ಮೀಟ್ ಯು ಎಂದು ಉದ್ಗರಿಸಿತು. ಇದರಿಂದ ಅಚ್ಚರಿಗೊಂಡ ಅಧ್ಯಕ್ಷರು ಇಟೀಸ್ ನೈಸ್ ಟು ಮೀಟ್ ಯು ಟೂ ಎಂದು ಉದ್ಗರಿಸಿದರು.ನಂತರ ಅಸೀಮೋ ಎಂಬ ಹೆಸರಿನ ರೋಬೋಟ್ ನಾನು ಸಾಸರ್ ಚೆಂಡನ್ನು ಕೂಡ ಒದೆಯಬಲ್ಲೆ ಎಂದು ಹೇಳಿತು.
 
ನಂತರ ರೋಬೋಟ್ ಸಾಸರ್ ಚೆಂಡನ್ನು ಒದೆದಾಗ ಒಬಾಮಾ ತಮ್ಮ ಬೂಟಿನಿಂದ ಅದನ್ನು ತಡೆದರು. ನಂತರ ರೋಬೋಟ್ ಕೋಣೆಯಲ್ಲಿ ಜಂಪ್‌ಗಳನ್ನು ಮಾಡುತ್ತಾ ಹೊಸ ಟ್ರಿಕ್ ತೋರಿಸಿತು. ರೋಬೋಟ್‌ನ ಕೌಶಲ್ಯಗಳನ್ನು ನೋಡಿ ಒಬಾಮಾ ಮೂಕವಿಸ್ಮಿತರಾದರು.
 

ವೆಬ್ದುನಿಯಾವನ್ನು ಓದಿ