ಜಿಹಾದ್‌ ಹೋರಾಟಕ್ಕಾಗಿ 29 ದಶಲಕ್ಷ ಡಾಲರ್ ಕೂಡಿಟ್ಟಿದ್ದ ಬಿನ್ ಲಾಡೆನ್

ಬುಧವಾರ, 2 ಮಾರ್ಚ್ 2016 (14:07 IST)
ಅಲ್ ಖಾಯಿದಾದ ಮಾಜಿ ಮುಖಂಡ ಒಸಾಮಾ ಬಿನ್ ಲಾಡೆನ್ ಸೂಡಾನ್‌ನಲ್ಲಿ ಮಿಲಿಯಾಂತರ ಡಾಲರ್ ಕೂಡಿಟ್ಟಿದ್ದು, ಜಿಹಾದ್ ಹೋರಾಟಕ್ಕೆ ಆ ಹಣವನ್ನು ಬಳಸುವಂತೆ ಲಿಖಿತ ಮರಣಪತ್ರದ ದಾಖಲೆಯಲ್ಲಿ ತಿಳಿಸಿದ್ದಾನೆ.

ಬಹಿರಂಗವಾದ ಒಂದು ದಾಖಲೆಯಲ್ಲಿ,  ಸೂಡಾನ್‌ನಲ್ಲಿ ಕೂಡಿಟ್ಟಿರುವ ಕನಿಷ್ಠ 29 ದಶಲಕ್ಷ ಡಾಲರ್ ಹಣವನ್ನು ಅವನ ಸಾವಿನ ಬಳಿಕ  ಭಾಗ ಮಾಡಬೇಕು. ಹೆಚ್ಚಿನ ಹಣವನ್ನು ಜಿಹಾದ್ ಯುದ್ಧಕ್ಕೆ ಬಳಸಬೇಕು ಎಂದು ಹೇಳಿದ್ದ. ಸುಮಾರು 113 ದಾಖಲೆಗಳ ಪೈಕಿ ಈ ದಾಖಲೆಯನ್ನು ಬಿನ್ ಲಾಡೆನ್ ಅವರ ಮರಣ ಪತ್ರ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
 
ಈ ದಾಖಲೆಗಳು 2009 ಮತ್ತು 2011ರ ನಡುವಿನ ದಿನಾಂಕವಾಗಿದ್ದು, ಸೌದಿ ರಿಯಾಲ್‌ ಮತ್ತು ಚಿನ್ನದಲ್ಲಿ ನಿರ್ದಿಷ್ಟ ಮೊತ್ತಗಳನ್ನು ತಾಯಿ, ಪುತ್ರ, ಪುತ್ರಿ, ಚಿಕ್ಕಪ್ಪ ಮತ್ತು ಚಿಕ್ಕಪ್ಪನ ಮಕ್ಕಳಿಗೆ ಮತ್ತು ಚಿಕ್ಕಮ್ಮಂದಿರಿಗೆ ಹಂಚಬೇಕೆಂದು ಸೂಚಿಸಿದ್ದಾನೆ. 

ಒಸಾಮಾ ಅಡಗುತಾಣದ ಮೇಲೆ 2011ರಂದು ಅಮೆರಿಕದ ವಿಶೇಷ ಪಡೆ ಸಿಬ್ಬಂದಿ ದಾಳಿ ನಡೆಸಿ ವಶಪಡಿಸಿಕೊಂಡ ದಾಖಲೆಗಳಲ್ಲಿ ಅಲ್ ಖಾಯಿದಾ ನಾಯಕರು ತಮ್ಮ ಗುಂಪಿನಲ್ಲಿ ಬೇಹುಗಾರಿಕೆ, ಆಕಾಶದಲ್ಲಿ ಹಾರುವ ಡ್ರೋನ್‌ಗಳು ಮತ್ತು ಅವರ ಚಲನವಲನಗಳ ಜಾಡು ಹಿಡಿಯುತ್ತಿರುವ ಗುಪ್ತ ಉಪಕರಣಗಳ ಬಗ್ಗೆ  ಚಿಂತೆಗೀಡಾಗಿದ್ದರು ಎಂಬ ವಿಷಯ ಬಹಿರಂಗವಾಗಿದೆ. 

ವೆಬ್ದುನಿಯಾವನ್ನು ಓದಿ