ಇಂಗ್ಲೆಂಡ್ ವಿಮಾನ ಅಪಘಾತದಲ್ಲಿ ಬಿನ್ ಲಾಡೆನ್ ಸೋದರಿ, ಮಲತಾಯಿ ಸಾವು?

ಶನಿವಾರ, 1 ಆಗಸ್ಟ್ 2015 (18:06 IST)
ಅಲ್ ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಸೋದರಿ ಮತ್ತು ಮಲತಾಯಿ ಇಂಗ್ಲೆಂಡ್ ಹ್ಯಾಂಪ್‌ಶೈರ್‌ನಲ್ಲಿ ಸಂಭವಿಸಿದ ಜೆಟ್ ವಿಮಾನ ಅಪಘಾತದಲ್ಲಿ ಸತ್ತಿದ್ದಾರೆಂದು ಶಂಕಿಸಲಾಗಿದೆ.  ಜೆಟ್ ವಿಮಾನವು ಕಾರು ಹರಾಜಿನ ಕೇಂದ್ರವೊಂದಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

 ಬಿನ್‌ ಲಾಡೆನ್ ಅಮೆರಿಕದ ಅವಳಿ ಗೋಪುರ ಧ್ವಂಸ ಮಾಡಿದ ಮೇಲೆ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ. ಅವನ ಸುಳಿವು ಪತ್ತೆಹಚ್ಚಿದ ಅಮೆರಿಕ ಸೈನ್ಯ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಲಾಡೆನ್ ಹತ್ಯೆ ಮಾಡಿತ್ತು. 

 
ಲಾಡನ್‌ನ ಮಲತಾಯಿ ರಾಜಾ ಹಶೀಮ್, ಮಲ ಸೋದರಿ ಸಾನಾ ಬಿನ್ ಲಾಡೆನ್ ಮತ್ತು ಅವಳ ಪತಿ ಜುಹೇರ್ ಹಶೀಮ್ ಮೃತರಲ್ಲಿ ಸೇರಿದ್ದಾರೆ. ಸೌದಿ ರಾಜಕುಮಾರಿ ಬಸ್ಮಾ ಬಿಂಟ್ ಸೌದ್ ಲಂಡನ್‌‌ನಲ್ಲಿ ವಾಸವಿದ್ದು, ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮೃತರ ಹೆಸರನ್ನು ಪ್ರಕಟಿಸಿದ್ದು, ತೀವ್ರ ಶೋಕವನ್ನು ವ್ಯಕ್ತಪಡಿಸಿದ್ದಾರೆ. 
 
ಮೃತರ ಗುರುತನ್ನು ದೃಢಪಡಿಸದೇ, ಬ್ರಿಟನ್ ಸೌದಿ ರಾಯಭಾರಿ ಪ್ರಿನ್ಸ್ ಮೊಹಮದ್ ಬಿನ್ ನವಾಫ್ ಅಲ್ ಸೌದ್ ರಾಯಭಾರ ಕಚೇರಿಯ ಟ್ವಿಟರ್‌ನಲ್ಲಿ ಬಿನ್ ಲಾಡೆನ್ ಕುಟುಂಬಕ್ಕೆ  ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ