ನೈಜೀರಿಯಾದಲ್ಲಿ 150 ಜನರನ್ನು ಕೊಂದ ಬೊಕೊ ಹರಾಂ ಉಗ್ರರು

ಶುಕ್ರವಾರ, 3 ಜುಲೈ 2015 (14:31 IST)
ಶಂಕಿತ ಬೊಕೋ ಹರಾಮ್ ಉಗ್ರಗಾಮಿಗಳು ಈಶಾನ್ಯ ನೈಜೀರಿಯಾ ಗ್ರಾಮಗಳಲ್ಲಿ ಸುಮಾರು 150 ಜನರನ್ನು ಕೊಚ್ಚಿ ಹಾಕಿದ್ದಾರೆ. ಮಸೀದಿಗಳಲ್ಲಿ ಪ್ರಾರ್ಥಿಸುತ್ತಿದ್ದ ಪುರುಷರನ್ನು ಮತ್ತು ಮಕ್ಕಳನ್ನು  ಬೊಕೊ ಹರಾಂ ಉಗ್ರರು ಕೊಚ್ಚಿಹಾಕಿದ್ದು, ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರನ್ನು ಗುಂಡಿಕ್ಕಿ ಸಾಯಿಸಿದ್ದಾರೆಂದು ಪ್ರತ್ಯಕ್ಷದರ್ಶಿಯೊಬ್ಬ ಗುರುವಾರ ಹೇಳಿದ್ದಾನೆ.

ಬುಧವಾರ ಸಂಜೆ ಬೊರ್ನೊ ರಾಜ್ಯದಲ್ಲಿ ಹತ್ತಾರು ಉಗ್ರಗಾಮಿಗಳು ಮೂರು ಕುಗ್ರಾಮಗಳಿಗೆ ದಾಳಿ ಮಾಡಿ ಮನೆಗಳಿಗೆ ಬೆಂಕಿಹಚ್ಚಿದರು. ಮೇನಲ್ಲಿ ಅಧ್ಯಕ್ಷ ಮುಹಮುದು ಬುಹಾರಿ ಅಧಿಕಾರಕ್ಕೆ ಬಂದ ನಂತರ ಇದು ಉಗ್ರಗಾಮಿಗಳ ಅತೀ ಬರ್ಬರ ಹಿಂಸಾಕಾಂಡವಾಗಿದೆ.
 
ಬಂದೂಕುಧಾರಿಗಳು ಕುಕಾವಾದಲ್ಲಿ ಕನಿಷ್ಠ 97ಜನರನ್ನು ಕೊಂದಿದ್ದಾರೆ. ಸ್ಥಳೀಯ ಕೊಲೊ ಎಂಬವ ತಾನು ಮೃತದೇಹಗಳನ್ನು ಎಣಿಸಿದ್ದಾಗಿ ಹೇಳಿದ್ದಾನೆ. ನನ್ನ ಚಿಕ್ಕಪ್ಪನ ಇಡೀ ಕುಟುಂಬವನ್ನೇ ಅಳಿಸಿಹಾಕಿದರು. ಚಿಕ್ಕಪ್ಪನ ಐವರು ಮಕ್ಕಳನ್ನೂ ಅವರು ಕೊಂದುಹಾಕಿದರು ಎಂದು ಕೋಲೊ ಹೇಳಿದ್ದಾನೆ. ಸುಮಾರು 50 ಉಗ್ರಗಾಮಿಗಳು ಗ್ರಾಮಕ್ಕೆ ದಾಳಿ ಮಾಡಿದರು ಎಂದು ಕುಕಾವಾದಲ್ಲಿ ಇನ್ನೊಬ್ಬ  ಸಾಕ್ಷಿ ಬಾಬಾಮಿ ಅಲ್ಲಾಜಿ ಕೊಲೋ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ