ನೈಜೀರಿಯಾದಲ್ಲಿ ಮಸೀದಿ, ರೆಸ್ಟೊರೆಂಟ್‌ನಲ್ಲಿ ಬಾಂಬ್ ಸ್ಫೋಟ: 44 ಜನರ ಸಾವು

ಸೋಮವಾರ, 6 ಜುಲೈ 2015 (16:12 IST)
ನೈಜೀರಿಯಾದ ಜೋಸ್‌‍ ನಗರದ ಮುಸ್ಲಿಂ ರೆಸ್ಟೊರೆಂಟ್ ಮತ್ತು ಕಿಕ್ಕಿರಿದ ಮಸೀದಿಯಲ್ಲಿ ಎರಡು ಬಾಂಬ್‌ಗಳು ಸ್ಫೋಟಿಸಿ 44 ಜನರು ಹತರಾಗಿದ್ದಾರೆ. ಈ  ಘಟನೆಯಲ್ಲಿ 67 ಜನರು ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
 
ಪ್ರಮುಖ ಮುಸ್ಲಿಂ ಧರ್ಮಗುರುವೊಬ್ಬರು ರಮ್ಜಾನ್ ಪವಿತ್ರ ಮಾಸದಲ್ಲಿ ಕಿಕ್ಕಿರಿದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಯಾಂಟಾಯಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿತು ಎಂದು ಅಜ್ಞಾತವಾಗಿರಲು ಬಯಸಿದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ಇನ್ನೊಂದು ಬಾಂಬ್ ಶಾಗಾಲಿಂಕು ರೆಸ್ಟರೆಂಟ್‌ನಲ್ಲಿ ಸ್ಫೋಟಿಸಿದೆ.ನೈಜೀರಿಯಾದ ಬಹುಸಂಖ್ಯಾತ ಮುಸ್ಲಿಮರು ಮತ್ತು ಕ್ರೈಸ್ತರು ನೆಲೆಸಿರುವ ಪ್ರದೇಶವಾಗಿದ್ದು, ಬೊಕೊ ಹರಾಂ ಉಗ್ರಗಾಮಿಗಳು ಹಿಂದೆ ಬಾಂಬ್ ಸ್ಫೋಟಿಸಿದ್ದರಿಂದ ನೂರಾರು ಜನರು ಸತ್ತಿದ್ದರು.

ವೆಬ್ದುನಿಯಾವನ್ನು ಓದಿ