ರಷ್ಯಾ ಜನರಲ್ ಜೀವವುಳಿಸಿದ ಮೆದುಳು ಸರ್ಜರಿ, ನೆಪೋಲಿಯನ್ ಸೋಲಿಸಲು ನೆರವಾಯಿತು!

ಗುರುವಾರ, 30 ಜುಲೈ 2015 (19:19 IST)
ಫ್ರೆಂಚ್ ಶಸ್ತ್ರಚಿಕಿತ್ಸಕರೊಬ್ಬರು ರಷ್ಯಾದ ಆಗಿನ ಜನರಲ್ ಮೈಕೇಲ್ ಕುಟುಜೋವ್ ಅವರಿಗೆ ಜೀವರಕ್ಷಕ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿರದಿದ್ದರೆ  ನೆಪೋಲಿಯನ್ ಬೊನಾಪಾರ್ಟೆ 1812ರಲ್ಲಿ ರಷ್ಯಾವನ್ನು ಜಯಿಸುತ್ತಿದ್ದರು ಎಂದು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 
 
ವೈದ್ಯಕೀಯವು ನಾಗರಿಕತೆಯ ದಿಕ್ಕನ್ನು ಹೇಗೆ ಬದಲಾಯಿಸಿತು ಎನ್ನುವುದರ ಕಥೆಯಾಗಿದ್ದು,  ಎರಡು ಶತಮಾನಗಳ ಕಾಲ ಕುಟುಜೋವ್ ಅವರ ನಂಬಲಾಗದ ಕಥೆಯ ಬಗ್ಗೆ ಇತಿಹಾಸವು  ಗಮನಹರಿಸಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
 
1774 ಮತ್ತು 1788ರಲ್ಲಿ ತಲೆಗೆ ತಾಗಿದ ಗುಂಡಿನಿಂದ ಶಸ್ತ್ರಚಿಕಿತ್ಸೆಯ ಬಳಿಕ ಜೀವವುಳಿಸಿಕೊಂಡ ಕುಟುಜೋವ್ ನೆಪೋಲಿಯನ್ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವ ಮೂಲಕ ರಷ್ಯಾದ ಲೆಜಂಡರಿ ಹೀರೋಗಳ ಸಾಲಿಗೆ ಸೇರಿದ್ದ.  ಫ್ರೆಂಚ್ ಸರ್ಜನ್ ಜೀನ್ ಮ್ಯಾಸೋಟ್ ಇದರಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಆಧುನಿಕ ನರವಿಜ್ಞಾನದ  ತಂತ್ರಗಳನ್ನು ಬಳಸಿಕೊಂಡು ಕುಟುಜೋವ್ ಜೀವವನ್ನು ಉಳಿಸಿದ್ದರು. 
 
ಕುಟುಜೋವ್ ಗಾಯದಿಂದ ಅವನ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮೊಟಕಾಗಿತ್ತು.  ಮೊದಲ ಗುಂಡಿನ ಗಾಯದ ಬಳಿಕ ಅವನ ಬದಲಾದ ವ್ಯಕ್ತಿತ್ವವನ್ನು ಕುರಿತು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನೆಪೋಲಿನ್ ಪಡೆಗಳಿಗೆ ಸವಾಲು ಹಾಕುವುದಕ್ಕೆ ಬದಲು ಕುಟುಜೋವ್  ಮಾಸ್ಕೋಗೆ ಬೆಂಕಿ ಹಚ್ಚುವಂತೆ ಆದೇಶಿಸಿದ ಮತ್ತು ಮಾಸ್ಕೋ ಪೂರ್ವಕ್ಕೆ ತನ್ನ ಸೇನೆಯೊಂದಿಗೆ ಪಲಾಯನ ಮಾಡಿದ. ನೆಪೋಲಿಯಾ ಸೇನೆ ಮಾಸ್ಕೋದ ಮೇಲೆ ಆಕ್ರಮಣ ಮಾಡಿತಾದರೂ ಆಹಾರದ ಕೊರತೆಯಿಂದ ಮತ್ತು ರಷ್ಯಾದ ಭಯಂಕರ ಚಳಿಗಾಲದಿಂದ ನೆಪೋಲಿಯನ್  ಸೈನಿಕರು ಪ್ರಾಣಕಳೆದುಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ