ನೆಚ್ಚಿನ ವೇಶ್ಯೆ ಬೇರೊಬ್ಬನ ಜತೆ ಮಲಗಿದ್ದಕ್ಕೆ 6 ಕೊಲೆ

ಶನಿವಾರ, 24 ಡಿಸೆಂಬರ್ 2016 (14:20 IST)
ತನ್ನ ನೆಚ್ಚಿನ ವೇಶ್ಯೆ ಬೇರೊಬ್ಬನೊಂದಿಗೆ ವ್ಯಸ್ತಳಾಗಿದ್ದಾಳೆ ಎಂದು ಮತ್ಸರದಲ್ಲಿ ತಾಳ್ಮೆ ಕಳೆದುಕೊಂಡ ವ್ಯಕ್ತಿಯೊಬ್ಬ ಬರೊಬ್ಬರಿ 6 ಜನರನ್ನು ಗುಂಡಿಕ್ಕಿ ಕೊಂದ ದಾರುಣ ಘಟನೆ ಬ್ರೆಜಿಲ್‌ನ ಸಾವ್ ಪಾಲೋನಲ್ಲಿ ನಡೆದಿದೆ. 

ಜಬೋಟಿಕಾಲ್ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು , ಗ್ರಾಹಕನೋರ್ವ ತಾನು ಖಾಯಂ ಆಗಿ ತೆರಳುತ್ತಿದ್ದ ವೇಶ್ಯಾಗ್ರಹಕ್ಕೆ ತೆರಳಿ ತನ್ನ ನೆಚ್ಚಿನ ವೇಶ್ಯೆಯನ್ನು ಕೇಳಿದ್ದಾನೆ. ಆಕೆ ಬೇರೊಬ್ಬನ ಜತೆಯಲ್ಲಿ ಇರುವುದು ತಿಳಿದು ಬಂದಾಗ ಮರಳಿ ತಾನು ಪಾರ್ಕ್ ಮಾಡಿದ್ದ ಕಾರ್ ಬಳಿ ಬಂದು ರಿವಾಲ್ವರ್ ಎತ್ತಿಕೊಂಡಿದ್ದಾನೆ.
 
ಅಲ್ಲಿಂದ ಮತ್ತೆ ವೇಶ್ಯಾಗ್ರಹಕ್ಕೆ ಹೋಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಆತ ಮಲಗಲು ಬಯಸಿದ್ದ ವೇಶ್ಯೆ, ಆಕೆಯ ಜತೆಗಿದ್ದ ಗ್ರಾಹಕ ಮತ್ತು ಇತರ ನಾಲ್ವರು ದುರ್ಮರಣವ್ವಪ್ಪಿದ್ದಾರೆ. 
 
ವೇಶ್ಯಾಗ್ರಹದಲ್ಲಿ ಗುಂಡಿನ ಮೊರೆತ ಕೇಳಿದ ಗ್ರಾಹಕರು ಮತ್ತು ವೇಶ್ಯೆಯರು ಅಲ್ಲಿಂದ ಎದ್ದು ಬಿದ್ದು ಓಡಿ ಹತ್ತಿರದ ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿದ್ದಾರೆ. 
 
ಕೃತ್ಯವೆಸಗಿದ ಬಳಿಕ ಅಲ್ಲಿಂದ ಪರಾರಿಯಾದ 27 ವರ್ಷದ ಆರೋಪಿ ಮರುದಿನ ಪೊಲೀಸರಿಗೆ ಶರಣಾಗಿದ್ದಾನೆ,
 
ವೇಶ್ಯಾಗೃಹದಲ್ಲಿ ಫೈರಿಂಗ್ ಶಬ್ಧ ಕೇಳಿದ ಇನ್ನಿತರ ವೇಶ್ಯೆಯರು ಮತ್ತು ಗ್ರಾಹಕರು ಹೊರಗೆ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಫೈರಿಂಗ್ ಬಳಿಕ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದು ಮರು ದಿನ ಪೊಲೀಸರಿಗೆ ಶರಣಾಗಿದ್ದಾನೆ.
 
ಆರೋಪಿ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು ಯಾವುದೇ ಅಪರಾಧ ಹಿನ್ನೆಲೆಯುಳ್ಳವನಲ್ಲ ಎಂದು ಬ್ರೆಜಿಲ್ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ