ವೇಶ್ಯೆಯರ ಜೊತೆ ಡ್ರಗ್ಸ್ ಸೇವನೆ : ಸಂಸತ್ತಿನ ಸ್ಥಾನಕ್ಕೆ ರಾಜೀನಾಮೆ

ಮಂಗಳವಾರ, 28 ಜುಲೈ 2015 (17:09 IST)
ಲಂಡನ್: ಬ್ರಿಟಿಷ್ ರಾಜಕಾರಣಿ ಲಾರ್ಡ್ ಜಾನ್ ಸೆವೆಲ್ ಅವರು ವೇಶ್ಯೆಯರ ಜತೆಗೂಡಿ ಕೊಕೇನ್ ಸೇದುತ್ತಿದ್ದ ವಿಡಿಯೋ ಚಿತ್ರವನ್ನು ಟಾಬ್ಲಾಯ್ಡು ಸುದ್ದಿಪತ್ರಿಕೆಯೊಂದು ಬಿಡುಗಡೆ ಮಾಡಿದ ಬಳಿಕ ಅವರು ಸಂಸತ್ತಿನ  ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

 ರೂಪರ್ಟ್ ಮರ್ಡೋಕ್ ಮಾಲೀಕತ್ವದ ಸನ್ ಸುದ್ದಿಪತ್ರಿಕೆ ತಾವು ವೇಶ್ಯೆಯರ ಜತೆ ಚಾಟ್ ಮಾಡುತ್ತಾ ಕಿತ್ತಲೆ ಬ್ರಾ ಧರಿಸಿದ ಚಿತ್ರಗಳನ್ನು ಪ್ರಕಟಿಸಿದ ಬಳಿಕ ತಮ್ಮಿಂದಾದ ನೋವು ಮತ್ತು ಮುಜುಗರದ ಸ್ಥಿತಿಗೆ ಜಾನ್ ಸೆವೆಲ್  ಕ್ಷಮಾಪಣೆ ಕೋರಿದ್ದಾರೆ. 
 
ಸ್ಕಾಟ್‌ಲೆಂಡ್ ಯಾರ್ಡ್ ಅವರ ವರ್ತನೆ ಕುರಿತು ತನಿಖೆ ನಡೆಸಿದ್ದು, ಸಂಸತ್ತಿನ ಸದನಗಳ ಬಳಿಯಿರುವ ಅವರ  ನಿವಾಸಕ್ಕೆ ದಾಳಿ ಮಾಡಿತ್ತು.   ನಾನು ಸಂಸತ್ತಿನ ಗುಮಾಸ್ತನಿಗೆ ಪತ್ರ ಬರೆದು ಸಂಸತ್ತಿನ ಸದಸ್ಯತ್ವವನ್ನು ರದ್ದು ಮಾಡಬೇಕೆಂದು ಕೋರಿದ್ದಾಗಿ ಸಿವೆಲ್ ಹೇಳಿಕೆಯಲ್ಲಿ ತಿಳಿಸಿದ್ದರು. ಸೆವೆಲ್ ವಿರುದ್ಧ ಗಂಭೀರ ಆರೋಪಗಳು ಇರುವುದರಿಂದ ಅವರು ಮುಂದುವರಿಯುವುದು ಸೂಕ್ತವೇ ಎಂದು ಪ್ರಧಾನಮಂತ್ರಿ ಡೇವಿಡ್ ಕ್ಯಾಮರೂನ್ ಪ್ರಶ್ನಿಸಿದ್ದರು.  

ವೆಬ್ದುನಿಯಾವನ್ನು ಓದಿ