ಬ್ರಿಟನ್ ಚುನಾವಣಾ ಪ್ರಚಾರದಲ್ಲಿ ಹಿಂದಿ ಹಾಡು

ಶನಿವಾರ, 25 ಏಪ್ರಿಲ್ 2015 (13:04 IST)
ಬ್ರಿಟನ್‌ನಲ್ಲಿ ಮೇ 7 ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಕನ್ಸರ್ವೇಟಿವ್ ಪಾರ್ಟಿ ಹೊಸ ಪ್ರಯೋಗವನ್ನು ನಡೆಸುತ್ತಿದೆ. 

ಆನಿವಾಸಿ ಭಾರತೀಯರನ್ನು ಆಕರ್ಷಿಸಲು ಹಿಂದಿ ಪ್ರಚಾರದಲ್ಲಿ ಪಕ್ಷದ ಕಾರ್ಯಕರ್ತರು ಹಿಂದಿ ಹಾಡುಗಳನ್ನು ಹಾಡುತ್ತಿದ್ದಾರೆ. 
 
ಬ್ರಿಟನ್ ಪ್ರಧಾನಿ ಡೆವಿಡ್ ಕೆಮರೂನ್ ನೇತೃತ್ವದ ಪಕ್ಷ ಇದಾಗಿದ್ದು. ತಮ್ಮ ಪಕ್ಷದ ಸಾಂಕೇತಿಕ ನೀಲಿ ಬಣ್ಣವನ್ನು ಉಲ್ಲೇಖಿಸಿ ಕ್ಯಾಮರೂನ್ 'ನೀಲಾ ಹೈ ಆಸ್ಮಾ' (ಆಕಾಶ ನೀಲಿಯಾಗಿದೆ) ಎಂಬ ಹಾಡನ್ನು ಬಿಡುಗಡೆ ಮಾಡಿದರು. 
 
ಈ ಹಾಡಿನ ಟ್ಯೂನ್ ಭಾರತೀಯರು ಕ್ಯಾಮರೂನ್ ಅವರಿಗೆ ಬೆಂಬಲ ನೀಡಲು ಉತ್ತೇಜಿಸುವಂತೆ ಇದೆ. ಹಾಡಿನ ಕೋರಸ್‌ನಲ್ಲಿ ಡೇವಿಡ್ ಕ್ಯಾಮರೂನ್ ಅವರ ಹೆಸರು ಮರುಕಳಿಸುತ್ತಿದೆ.  
 
ಕನ್ಸರ್ವೇಟಿವ್ ಪಾರ್ಟಿಯಲ್ಲಿ ಸ್ಥಾನಿಕ ಸಂಸದರಾದ -ಶೈಲೇಶ್ ವಾರಾ, ಪ್ರೀತಿ ಪಟೇಲ್, ಅಲೋಕ್ ಶರ್ಮಾ ಮತ್ತು ಪಾಲ್ ಉಪ್ಪಲ್ ಸೇರಿದಂತೆ ಹೆಚ್ಚಿನ ಅಭ್ಯರ್ಥಿಗಳು ಭಾರತೀಯರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ