ಮಗು ನೀರಿನಲ್ಲಿ ಮುಳುಗುವಾಗ ಫೇಸ್‌ಬುಕ್ ಚಕ್ ಮಾಡ್ತಿದ್ದ ತಾಯಿ

ಶನಿವಾರ, 10 ಅಕ್ಟೋಬರ್ 2015 (16:27 IST)
ತನ್ನ ಎರಡು ವರ್ಷದ ಮಗು ನೀರಿನಲ್ಲಿ ಮುಳುಗುತ್ತಿದ್ದರೂ ಫೋನ್‌ನಲ್ಲಿ ಫೇಸ್ ಬುಕ್ ಚಕ್ ಮಾಡುತ್ತಿದ್ದ ಬ್ರಿಟಿಷ್ ತಾಯಿಯೊಬ್ಬರು ಮಗುವಿನ ಮೇಲೆ ತೋರಿಸಿದ ಕ್ರೌರ್ಯಕ್ಕಾಗಿ 5 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಮಗು ಮೃತಪಟ್ಟಿದ್ದರಿಂದ ಉಂಟಾದ ದುಃಖ ಒಂದುಕಡೆಯಾದರೆ,  ತನ್ನ ನಿರ್ಲಕ್ಷ್ಯದಿಂದ ಮಗು ಸತ್ತಿದ್ದರಿಂದ ಜೈಲಿಗೆ ಹೋಗಬೇಕಾದ ನೋವು ಇನ್ನೊಂದು ಕಡೆ.

 ಮಗುವನ್ನು ಕೆಟ್ಟದಾಗಿ ಪೋಷಣೆ ಮಾಡಿದ ಕ್ಲೈರ್ ಬಾರ್ನೆಟ್ ಅವರನ್ನು ಟೀಕಿಸಿದ ನ್ಯಾಯಾಧೀಶರು ಮಗುವಿನ ಜವಾಬ್ದಾರಿ ಹೊರಬೇಕಾಗಿದ್ದವರು ಅದಕ್ಕೆ ಅಪಾಯಕಾರಿಯಾಗಿದ್ದೀರಿ ಎಂದು ಹಲ್ ಕ್ರೌನ್ ಕೋರ್ಟ್‌ನ ವಿಚಾರಣೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.
 
2 ವರ್ಷದ ಮಗು ಜೋಷುವಾ ಬಾರ್ನೆಟ್ 2014ರ ಮಾರ್ಚ್ 17ರಂದು ಪೂರ್ವ ಯಾರ್ಕ್‌ಶೈರ್‌ನ ತನ್ನ ಮನೆಯ ತೋಟದಲ್ಲಿ ಆಡುವಾಗ ಕೊಳದಲ್ಲಿ ಬಿದ್ದಿತ್ತು. 
 ಮಗುವಿನ ಸಾವಿನ ಸಂದರ್ಭದಲ್ಲಿ ಬಾರ್ನೆಟ್ ಮೊಬೈಲ್‌ನಲ್ಲಿ ಫೇಸ್ ಬುಕ್ ಚಕ್ ಮಾಡುತ್ತಿದ್ದರು. ಆದರೆ ಬಳಿಕ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಫಲಕಾರಿಯಾಗಲಿಲ್ಲ.  ಪೊಲೀಸರು ತನಿಖೆ ನಡೆಸಿದಾಗ ತೋಟದಲ್ಲಿ ಏನಾಯಿತು ಎಂಬ ಬಗ್ಗೆ ಭಿನ್ನವಾದ ಹೇಳಿಕೆಗಳನ್ನು ನೀಡಿದ್ದರು. ಜೋಷುವಾನನ್ನು ರಸ್ತೆಯಲ್ಲಿ ಆಟವಾಡಲು ತಾಯಿ ಬಿಡುತ್ತಿದ್ದುದು ಕೂಡ ಕೋರ್ಟ್ ಗಮನಕ್ಕೆ ಬಂತು. 
 
ಜೋಷುವಾಗೆ ಕಾರು ಡಿಕ್ಕಿಹೊಡೆಯುವುದು ಸ್ವಲ್ಪದರಲ್ಲಿ ತಪ್ಪಿದ್ದರಿಂದ ನೆರೆಮನೆಯವರು ಸಾಮಾಜಿಕ ಸೇವೆಗಳನ್ನು ಸಂಪರ್ಕಿಸಿದ್ದರು.  ಮಗುವಿನ ಮೇಲೆ ಕ್ರೌರ್ಯ ಪ್ರದರ್ಶನದ ನಾಲ್ಕು ಪ್ರಕರಣಗಳಲ್ಲಿ ಬಾರ್ನೆಟ್ ತಪ್ಪಿತಸ್ಥರಾಗಿದ್ದರು. 

ವೆಬ್ದುನಿಯಾವನ್ನು ಓದಿ