ಬುರ್ಕಾ ಧರಿಸಿದ್ರೆ ವಿಟಮಿನ್ ಡಿ ಕೊರತೆ ಉಂಟಾಗತ್ತಂತೆ..

ಶನಿವಾರ, 27 ಮೇ 2017 (10:05 IST)
ಲಂಡನ್:ಬುರ್ಕಾ ಧರಿಸುವುದರಿಂದ ಸೂರ್ಯನ ಪ್ರಕಾಶ ಸಮರ್ಪಕವಾಗಿ ಬೀಳದೇ ಇರುವುದರಿಂದ ವಿಟಮನ್ ಡಿ ಕೊರತೆ ಉಂಟಾಗುತ್ತದೆ ಎಂಬುದು  ಬ್ರಿಟನ್ ನ ರಾಜಕೀಯ ಪಕ್ಷವೊಂದರ ಅಭಿಮತ. ಬುರ್ಕಾ ಧರಿಸುವುದರಿಂದ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ. ಹೀಗಾಗಿ ಬ್ರಿಟನ್ ಬಲಪಂಥೀಯ ಪಕ್ಷ ಯುಕೆ ಇಂಡಿಪೆಂಡೆನ್ಸ್ ಪಾರ್ಟಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸುವುದಾಗಿ ತಿಳಿಸಿದೆ.
 
ಬುರ್ಕಾ ಧಾರಣೆಯಿಂದ ಗುರುತನ್ನು ಮರೆಮಾಚಿದಂತಾಗುತ್ತದೆ, ಸಂವಹನಕ್ಕೆ ಅಡ್ಡಿಯಾಗುತ್ತದೆ, ಉದ್ಯೋಗಾವಕಾಶಕ್ಕೆ ಸೀಮಿತತೆ ಒದಗುತ್ತದೆ, ಮತ್ತು ಗೃಹ ಹಿಂಸೆಯ ಸಾಕ್ಷ್ಯವನ್ನು ಮುಚ್ಚಿಹಾಕುತ್ತದೆ, ಅಲ್ಲದೇ ಮುಖ್ಯವಾಗಿ ದೇಹಕ್ಕೆ ಅತ್ಯಂತ ಅಗತ್ಯವಾದ  ಸೂರ್ಯನ ಬೆಳಿಕಿನಿಂದ ಸಿಗುವ ವಿಟಮಿನ್ ಡಿ ಕೊರತೆಯನ್ನುಂಟುಮಾಡುತ್ತದೆ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ.
 
ಈ ಮೂಲಕ ಚುನಾವಣೆ ಪ್ರಚಾರಕ್ಕಿಳಿದಿರುವ ಪೌಲ್ ನುಟ್ಟಾಲ್ ನೇತೃತ್ವದ ಪಕ್ಷ ಬುರ್ಕಾ ನಿಷೇಧವನ್ನು ತನ್ನ ಅಜಂಡಾವನ್ನಾಗಿ ಮಾಡಿಕೊಂಡಿದೆ.
 

ವೆಬ್ದುನಿಯಾವನ್ನು ಓದಿ