ಥಾಯ್ ರಾಜಕುಮಾರಿಗಾಗಿ 40,000 ಡಾಲರ್ ವೆಚ್ಚದಲ್ಲಿ ಲೇಕ್‌ಸೈಡ್ ಟಾಯ್ಲೆಟ್

ಸೋಮವಾರ, 22 ಫೆಬ್ರವರಿ 2016 (13:39 IST)
ಥಾಯ್ಲೆಂಡ್ ರಾಜಕುಮಾರಿ ಕಾಂಬೋಡಿಯಾದ ಅತೀ ಬಡ ಪ್ರಾಂತ್ಯವೊಂದಕ್ಕೆ  ಮೂರು ದಿನಗಳ ಭೇಟಿ ನೀಡುತ್ತಿದ್ದು, ಅವರಿಗಾಗಿ ಹವಾನಿಯಂತ್ರಿತ ಶೌಚಾಲಯನ್ನು 40,000 ಡಾಲರ್ ವೆಚ್ಚದಲ್ಲಿ ನಿರ್ಮಿಸುತ್ತಿರುವುದು ವಿವಾದಕ್ಕೆ ಗುರಿಯಾಗಿದೆ. ಐಷಾರಾಮಿ ಶೌಚಾಲಯವನ್ನು ರತ್ನಾಕ್ಕಿರಿ ಪ್ರಾಂತ್ಯದ ರಕ್ಷಿತ ಸರೋವರ ಯೀಕ್ ಲಾವೋಮ್ ದಂಡೆಯಲ್ಲಿ ನಿರ್ಮಿಸಲಾಗುತ್ತಿದ್ದು, ಅಲ್ಲಿ ರಾಜಕುಮಾರಿ ಮಹಾ ಚಾಕ್ರಿ ಸಿರಿನ್‌ದಾರ್ನ್ ಮೂರು ದಿನಗಳ ಭೇಟಿಯ ಮೊದಲ ಹಂತದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.
 
ಬಿಳಿಯ ಬಣ್ಣದ ಮೆಟ್ಟಿಲುಗಳು ಮತ್ತು ಬೆಳ್ಳಿಯ ರೈಲಿಂಗ್‌ಗಳಿಂದ ಕೂಡಿದ ಬಿಳಿಯ ಹೆಂಚಿನ ಛಾವಣಿಯ 8 ಮೀಟರ್ ಚದರದ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲು ಥಾಯ್ ನಿರ್ಮಾಣ ಕಂಪನಿ 19 ದಿನ ತೆಗೆದುಕೊಂಡಿದೆ.
 
ರಾಜಕುಮಾರಿ ಸರೋವರಕ್ಕೆ ಒಂದು ರಾತ್ರಿಯ ಭೇಟಿಗಾಗಿ ಈ ಶೌಚಾಲಯವನ್ನು ಮೀಸಲಾಗಿಡಲಾಗಿದೆ. ಅವರು ನಿರ್ಗಮಿಸಿದ ಬಳಿಕ ಮರುನಿರ್ಮಾಣ ಮಾಡಿ ಸ್ಥಳೀಯ ಸಮುದಾಯ ಕಚೇರಿಗೆ ಬಳಸಿಕೊಳ್ಳಬಹುದು ಎಂದು ಎಸ್‌ಸಿಜಿ ಮ್ಯಾನೇಜರ್ ತಿಳಿಸಿದ್ದು, ಕೇವಲ ಒಂದು ಬಾರಿ ಬಳಸುವ ಈ ಸೌಲಭ್ಯಕ್ಕೆ 40,000 ಡಾಲರ್ ವೆಚ್ಚ ಮಾಡುವುದನ್ನು ಸಮರ್ಥಿಸಿಕೊಂಡರು.
 
 ಸಾಮಾನ್ಯ ಜನರು ರಾಜವಂಶದ ಟಾಯ್ಲೆಟ್ ಬಳಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದರು. ರತನ್‌ಕಿರಿ ಕಾಂಬೋಡಿಯಾದಲ್ಲಿ ಅತ್ಯಂತ ಹಿಂದುಳಿದ ಪ್ರಾಂತ್ಯವಾಗಿದ್ದು, ಬಡರೈತರು ಮತ್ತು ಗಣಿಗಾರಿಕೆ ಶೋಷಣೆಯ ಇತಿಹಾಸ ಹೊಂದಿದೆ.

ವೆಬ್ದುನಿಯಾವನ್ನು ಓದಿ