ಟರ್ಕಿಯಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ 28 ಜನರ ಬಲಿ

ಗುರುವಾರ, 18 ಫೆಬ್ರವರಿ 2016 (20:13 IST)
ರಾಜಧಾನಿ ಅಂಕಾರಾದ ಹೃದಯಭಾಗದಲ್ಲಿ ಟರ್ಕಿಯ ಮಿಲಿಟರಿ ಮೇಲೆ ಗುರಿಯಿರಿಸಿದ ಕಾರ್ ಬಾಂಬ್ ಸ್ಫೋಟದಲ್ಲಿ 28 ಜನರು ಮೃತರಾಗಿದ್ದು, 61 ಮಂದಿಗೆ ಗಾಯಗಳಾಗಿವೆ. ದೇಶವನ್ನು ತಲ್ಲಣಗೊಳಿಸಿದ ಸರಣಿ ದಾಳಿಗಳಲ್ಲಿ ಇದು ಇತ್ತೀಚಿನದಾಗಿದೆ.  ಬುಧವಾರ ರಾತ್ರಿ ಮಿಲಿಟರಿ ವಾಹನಗಳ ಬೆಂಗಾವಲಿಗೆ ಸ್ಫೋಟ ಅಪ್ಪಳಿಸಿದೆ ಎಂದು ಉಪ ಪ್ರಧಾನಿ ನುಮಾನ್ ಕುರ್ಟುಲ್‌ಮಸ್ ತಿಳಿಸಿದರು.. ಈ ದಾಳಿಯ ಕೈವಾಡ ಯಾರದ್ದೆಂದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ದಾಳಿಕೋರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಅಧ್ಯಕ್ಷ ರಿಸೆಪ್ ತಾಯಿಪ್ ಎರ್ಡೋಗನ್ ಪಣತೊಟ್ಟಿದ್ದಾರೆ.  ಜಿಹಾದಿಗಳು ಮತ್ತು ಕುರ್ದಿ ಬಂಡುಕೋರರ ಕೈವಾಡವಿರುವ ಮಾರಣಾಂತಿಕ ದಾಳಿಗಳ ಬೆನ್ನಹಿಂದೆಯೇ ಈ ದಾಳಿ ನಡೆದಿದೆ. 
 
ಹತ್ತಾರು ಸೈನಿಕರನ್ನು ಒಯ್ಯುತ್ತಿದ್ದ ಮಿಲಿಟರಿ ಬಸ್‌ಗಳ ಬೆಂಗಾವಲು ವಾಹನ ಅಂಕಾರದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ನಿಂತಾಗ ಕಾರ್ ಬಾಂಬ್ ಸ್ಫೋಟಿಸಿತು. "This ಸ್ಫೋಟದ ತೀವ್ರತೆಯಿಂದ ಟರ್ಕಿ ಮಿಲಸಿಟರಿ ಮುಖ್ಯಕೇಂದ್ರ ಮತ್ತು ಸಂಸತ್ತಿಗೆ ಸಮೀಪದಲ್ಲೇ  ದಟ್ಟವಾದ ಹೊಗೆಯು ನಗರದಲ್ಲಿ ವ್ಯಾಪಿಸಿತ್ತು. ಅಂಕಾರಾದಲ್ಲಿ ಪ್ರತಿಧ್ವನಿಸಿದ ಸ್ಫೋಟದ ಸದ್ದಿಗೆ ನಿವಾಸಿಗಳು ಬೆಚ್ಚಿಬಿದ್ದರು.   ಜನರು ಗಾಬರಿಯಿಂದ ದಿಕ್ಕಾಪಾಲಾಗಿ ಓಡುತ್ತಿದ್ದರು. ಭಾರೀ ಬೆಂಕಿಯ ಉಂಡೆಯನ್ನು ತಾನು ಕಂಡಿದ್ದಾಗಿ 25 ವರ್ಷದ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ