ಆತ್ಮಾಹುತಿ ದಾಳಿ ಮಾಡಿದ 10 ವರ್ಷದ ಬಾಲಕಿ: 16 ಜನರ ಸಾವು

ಸೋಮವಾರ, 27 ಜುಲೈ 2015 (16:18 IST)
ನೈಜೀರಿಯಾದಲ್ಲಿ ಚಿಕ್ಕ ಬಾಲಕ, ಬಾಲಕಿಯರನ್ನು ಆತ್ಮಹತ್ಯಾ ದಾಳಿಗೆ ಭಯೋತ್ಪಾದಕರು ಬಳಸಿಕೊಳ್ಳುತ್ತಿದ್ದು, ಈಶಾನ್ಯ ನೈಜೀರಿಯಾದಲ್ಲಿ 10 ವರ್ಷದ ಬಾಲಕಿಯೊಬ್ಬಳು ನಡೆಸಿದ ಆತ್ಮಹತ್ಯಾ ದಾಳಿಗೆ  16 ಜನರು ಸತ್ತಿದ್ದು 40 ಮಂದಿ ಗಾಯಗೊಂಡಿದ್ದಾರೆ.  ಯೋಬೆಯ ಡಮಾಟುರು ನಗರದಲ್ಲಿ ಕಿಕ್ಕಿರಿದ ಮಾರುಕಟ್ಟೆ ಪ್ರದೇಶದಲ್ಲಿ ಬಾಲಕಿ ತನ್ನ ಮೈಗೆ ಕಟ್ಟಿದ್ದ ಬಾಂಬ್ ಸ್ಫೋಟಿಸಿಕೊಂಡಳು. 
 
ಭಾನುವಾರ ಬೆಳಿಗ್ಗೆ ಮಾರುಕಟ್ಟೆಯೊಳಗೆ ಜನರ ಗುಂಪನ್ನು ಒಳಕ್ಕೆ ಬಿಡಲು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿರುವಾಗ ಬಾಲಕಿ ಸ್ಫೋಟಕವನ್ನು ಸಿಡಿಸಿ ಆತ್ಮಾಹುತಿ ಬಾಂಬ್ ದಾಳಿ ಮಾಡಿದಳು. ಯಾವುದೇ ಗುಂಪು ಬಾಂಬ್ ದಾಳಿಗೆ ಹೊಣೆ ಹೊತ್ತಿಲ್ಲ. ಆದರೆ ಇತ್ತೀಚಿನ  ಮಾಸಗಳಲ್ಲಿ ಬೋಕೋ ಹರಾಂ ಇದೇ ರೀತಿಯ ದಾಳಿಗಳನ್ನು ನಡೆಸಿದೆಯೆಂದು ಆರೋಪಿಸಲಾಗಿದೆ. 
 
ನಗರದಲ್ಲಿ ಈದ್  ಮುಸ್ಲಿಂ ಹಬ್ಬದಲ್ಲಿ ಪ್ರಾರ್ಥನೆಯಲ್ಲಿ ನಿರತರಾಗಿದ್ದ ಜನರ ಮೇಲೆ ಇಬ್ಬರು ಮಹಿಳಾ ಆತ್ಮಾಹುತಿ ಬಾಂಬರ್‌ಗಳು ಸ್ಫೋಟ ನಡೆಸಿದ್ದರಿಂದ ಕೆಲವೇ ದಿನಗಳಲ್ಲಿ ಈ ಸ್ಫೋಟ ಸಂಭವಿಸಿದೆ. 

ವೆಬ್ದುನಿಯಾವನ್ನು ಓದಿ