ಪ್ರೀತಿಯನ್ನು ತಿರಸ್ಕರಿಸಿದ ಯುವತಿಯನ್ನು 15 ಬಾರಿ ಇರಿದು ಕೊಂದ ಲವರ್

ಬುಧವಾರ, 1 ಜುಲೈ 2015 (16:02 IST)
ನಗರದ ಶಾಪಿಂಗ್‌ಮಾಲ್‌ನಲ್ಲಿ ಪ್ರಿಯಕರನೊಬ್ಬ ತನ್ನ ಪ್ರಿಯತಮೆಗೆ ನೂರಾರು ಮಂದಿಯ ಎದುರುಗಡೆ 13 ಬಾರಿ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ
 
ಕೊಲಂಬೊದ ವಾಟ್ಟಲಾದಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಪ್ರೀತಿಯ ವಿಷಯದಲ್ಲಿ ಇಬ್ಬರ ನಡುವೆ ಜಗಳವಾದಾಗ ಯುವಕನೊಬ್ಬ ತನ್ನ 19 ವರ್ಷ ವಯಸ್ಸಿನ ಪ್ರಿಯತಮೆ ಫಾತಿಮಾ ರೋಶನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.  
 
ಆರೋಪಿಯ ಕೃತ್ಯ ಮಾಲ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಾಮಾನ್ಯ ಗ್ರಾಹಕನಂತೆ ಮಾಲ್ ಪ್ರವೇಶಿಸಿದ ಆರೋಪಿ, ಪ್ರಿಯತಮೆ ರೋಶನಿಯ ಹತ್ತಿರ ಹೋಗುತ್ತಿದ್ದಂತೆ ಚಾಕುವಿನಿಂದ ಇರಿಯಲು ಆರಂಭಿಸಿದ.
 
ಮಾಲ್ ಸಿಬ್ಬಂದಿಗಳು ಆರೋಪಿಯನ್ನು ತಡೆಯಲು ಪ್ರಯತ್ನಿಸಿದರಾದರೂ ವಿಫಲವಾಯಿತು. ಆಕೆಯನ್ನು 13 ಬಾರಿ ಚಾಕುವಿಂದ ತಿವಿದಿದ್ದರಿಂದ ಯುವತಿ ರೋಶನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
 
ತದನಂತರ, ಆರೋಪಿ ಚಾಕುವಿನಿಂದ ತನ್ನ ಗಂಟಲನ್ನು ಸೀಳುವ ಪ್ರಯತ್ನ ಮಾಡಿದರಾದರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. 
 
ಆರೋಪಿ ಯುವಕ ಮತ್ತು ಯುವತಿ ಫಾತಿಮಾ ರೋಶನಿ ದೀರ್ಘಾವಧಿಯಿಂದ ಪ್ರೀತಿಸುತ್ತಿದ್ದರಾದರೂ ಇಬ್ಬರ ಧರ್ಮಗಳಉ ಬೇರೆ ಬೇರೆ ಯಾಗಿದ್ದರಿಂದ ವಿವಾಹವಾಗಲು ಸಾಧ್ಯವಾಗಿರಲಿಲ್ಲ. ಹತ್ಯೆಯ ಹಿಂದಿನ ಮೂಲ ಕಾರಣ ಇದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ