100 ಭಾರತೀಯ ಸೈನಿಕರನ್ನು ಕೈವಶ ಮಾಡಿಕೊಂಡ ಚೀನಿಯರು

ಮಂಗಳವಾರ, 16 ಸೆಪ್ಟಂಬರ್ 2014 (18:06 IST)
ಚೀನಾದ ಪಡೆಗಳು ಭಾರತದ ಗಡಿಯಲ್ಲಿ ಮತ್ತೆ ದುಸ್ಸಾಹಸಕ್ಕೆ ಇಳಿದಿದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತ ಭೇಟಿ ಮುನ್ನವೇ ಗಡಿಯೊಳಕ್ಕೆ ಅತಿಕ್ರಮಣ ಮಾಡಿದೆ. ಲಡಖ್ ಚುಮುರ್ ಜಿಲ್ಲೆಯಲ್ಲಿ ಚೀನಿ ಸೈನಿಕರ ಅತಿಕ್ರಮಣ ವರದಿಯಾಗಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ ಸುಮಾರು 300 ಸೈನಿಕರು 100 ಭಾರತೀಯ ಸೈನಿಕರನ್ನು ಕೈವಶ ಮಾಡಿಕೊಂಡಿದ್ದು, ಅವರನ್ನು ಬಿಟ್ಟಿಲ್ಲವೆಂದು ತಿಳಿದುಬಂದಿದೆ.

 
ಭಾನುವಾರ ಚೀನಾದ ಪಡೆಗಳು ಭಾರತದ ಗಡಿಯಲ್ಲಿ 500 ಮೀಟರ್‌ವರೆಗೆ ಅತಿಕ್ರಮಣ ಮಾಡಿದ್ದರು. ಚೀನಿ ಸೈನಿಕರ ಅತಿಕ್ರಮಣ ದುಸ್ಸಾಹಸ ಈ ವರ್ಷದ ಆಗಸ್ಟ್‌ವರೆಗೆ 334 ಬಾರಿ ನಡೆದಿದೆ.
 
ಸೆಪ್ಟಂಬರ್ 17ರಂದು ಜೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಗುಜರಾತಿಗೆ ಆಗಮಿಸಲಿದ್ದಾರೆ. ಆದರೆ ಚೀನಿ ಸೈನಿಕರ ಅತಿಕ್ರಮಣ ಮಾತ್ರ ಇನ್ನೂ ನಿಂತಿಲ್ಲ. ಅತಿಕ್ರಮಣದ ಇತ್ತೀಚಿನ ವಿದ್ಯಮಾನದ ಬಳಿಕ, ಚೀನಿ ಸೇನೆ ಭಾರತೀಯ ಸೈನಿಕರನ್ನು ಹಿಡಿದಿಟ್ಟಿರುವುದರಿಂದ ಉದ್ವಿಗ್ನ ವಾತಾವರಣ ಉಂಟಾಗಿದೆ. ಭಾರತ-ಚೀನಾ ಗಡಿಯ ಡೆಮ್ಚೋಕ್ ಪ್ರದೇಶದಲ್ಲಿ ಉಭಯ ರಾಷ್ಟ್ರಗಳು ಇನ್ನಷ್ಟು ಸೈನಿಕರನ್ನು ಕಳಿಸಿವೆ.  

ವೆಬ್ದುನಿಯಾವನ್ನು ಓದಿ