ಮಿಲಿಟರಿ ಪರೇಡ್‌‍ಗೆ ಕೋತಿಗಳು, ಹದ್ದುಗಳನ್ನು ನಿಯೋಜಿಸಿದ ಚೀನಾ

ಮಂಗಳವಾರ, 1 ಸೆಪ್ಟಂಬರ್ 2015 (19:33 IST)
ಈ ವಾರ ವಿಶ್ವ 2ನೇ ಮಹಾಯುದ್ಧದ ಅಂತ್ಯದ 70 ನೇ ವಾರ್ಷಿಕದ ಅಂಗವಾಗಿ ನಡೆಯುವ ಭಾರೀ ವೈಮಾನಿಕ ಪರೇಡ್‌ನಲ್ಲಿ ವಿಮಾನಗಳ ಸುರಕ್ಷತೆಗಾಗಿ ಚೀನಾ ಕೋತಿಗಳನ್ನು ಮತ್ತು ಹದ್ದುಗಳನ್ನು ಬಾಡಿಗೆ ಪಡೆದಿವೆ. ವಾಯು ಪಡೆ ನೆಲೆಯಲ್ಲಿ ಮಿಲಿಟರಿ ಸಿಬ್ಬಂದಿಯು ಈ ಪ್ರಾಣಿಗಳಿಗೆ ತರಬೇತಿ ನೀಡುತ್ತಿದೆ. ಇದು ಕೋತಿಗಳಿಗೆ ಮರಗಳಲ್ಲಿರುವ ಗೂಡುಗಳನ್ನು ಕೆಡಿಸಲು ಮತ್ತು ಹದ್ದುಗಳು ಆಕಾಶದಲ್ಲಿ ಗಸ್ತು ತಿರುಗಿ ಇತರೆ ಪಕ್ಷಿಗಳನ್ನು ಓಡಿಸುವುದಕ್ಕೆ ಬಳಸುತ್ತವೆ.
 
ಪರೇಡ್‌ನಲ್ಲಿ  ಒಳಗೊಂಡ ವಾಯುಪಡೆ ನೆಲೆಯಲ್ಲಿ ಪ್ರಾಣಿಗಳನ್ನು ನಿಯೋಜಿಸಲಾಗಿದೆ.  ಪಕ್ಷಿಗಳು ವಿಮಾನಗಳಿಗೆ ತೀವ್ರ ಹಾನಿಯುಂಟುಮಾಡುವ ಸಾಧ್ಯತೆಯಿದ್ದು,  30 ಮೀಟರ್ ಎತ್ತರದ ಮರಗಳನ್ನು ಏರುವುದಕ್ಕೆ ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ವಾಂಗ್ ಮಿಂಗ್ಜಿ ತಿಳಿಸಿದ್ದಾರೆ. 
 
ಶಾಟ್‌ಗನ್‌ಗಳಿಂದ ನಾವು ಎರಡು ಗೂಡನ್ನು ನಾಶಮಾಡಬಹುದು. ಜಲಫಿರಂಗಿ ಬಳಸಿದರೆ ಇದು ನೀರಿನ ಮತ್ತು ಮಾನವ ಸಂಪನ್ಮೂಲಗಳ ವ್ಯರ್ಥ ಪೋಲು. ಅಧಿಕಾರಿಗಳ ಬಳಿ 5 ಕೋತಿಗಳಿದ್ದು, ದಿನಕ್ಕೆ 60 ಗೂಡುಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. 
 
ಕಮ್ಯೂನಿಸ್ಟ್ ರಾಷ್ಟ್ರವು  ಸೆ.3ರಂದು 3600 ಕಿಮೀ ವ್ಯಾಪ್ತಿಯ ಖಂಡಾಂತರ ಕ್ಷಿಪಣಿ ಮತ್ತು ಬಾಂಬರ್‌ಗಳ ಜತೆಗೆ ಕೆಲವು ಶಸ್ತ್ರಾಸ್ತ್ರಗಳ ಪರೇಡ್ ನಡೆಸಲಿದೆ. ಇದಕ್ಕೆ 30 ವಿಶ್ವ ನಾಯಕರು ಭಾಗವಹಿಸಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ