ಭೂತಾನ್ ನೆರವಿಗೆ ಭಾರತ ಬಂದಂತೆ ಪಾಕ್ ಬಯಸಿದರೆ ಕಾಶ್ಮೀರಕ್ಕೆ ಎಂಟ್ರಿ: ಚೀನಾದ ಹೊಸ ದಾಳ

ಸೋಮವಾರ, 10 ಜುಲೈ 2017 (16:41 IST)
ನೆರೆಯ ಕಪಟಿ ಚೀನಾರಾಷ್ಟ್ರ ಭಾರತವನ್ನ ದೊಕ್ಲಾಮ್ ಪ್ರದೇಶದಿಂದ ಹಿಮ್ಮೆಟ್ಟಿಸಲು ದಿನಕ್ಕೊಂದು ದಾರಿ ಹುಡುಕುತ್ತಿದೆ. ಭೂತಾನ್ ಮನವಿ ಮೇರೆಗೆ ದೊಕ್ಲಾಮ್ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ ಕಾರ್ಯಕ್ಕೆ ಭಾರತ ಸೇನೆ ತಡೆಯೊಡ್ಡಿರುವ ರೀತಿಯೇ ಪಾಕಿಸ್ತಾನ ಮನವಿ ಮಾಡಿದರೆ ತೃತೀಯ ರಾಷ್ಟ್ರದ ಸೇನೆ ವಿವಾದಿತ ಕಾಶ್ಮೀರದಲ್ಲಿ ಸೇನೆ ನಿಯೋಜಿಸಲಿದೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ಲೇಖನವೊಂದರಲ್ಲಿ ಉಲ್ಲೇಖಿಸಲಾಗಿದೆ.

ಚೀನಾದ ಬುದ್ಧಿಜೀವಿ ಎಂದೇ ಕರೆಯಲಾಗುವ ಪ್ರೋಫೆಸರ್ ಲಾಂಗ್ ಷಿಂಗ್ ಚುನ್ ಬರೆದಿರುವ ಲೇಖನದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತದ ಲಾಜಿಕ್ ರೀತಿಯೇ, ಪಾಕಿಸ್ತಾನ ಮನವಿ ಮಾಡಿದರೆ ಭಾರತ ಮತ್ತು ಪಾಕಿಸ್ತಾನದ ವಿವಾದಿತ ಪ್ರದೇಶಕ್ಕೆ ತೃತೀಯ ದೇಶದ ಆರ್ಮಿ ದಾಂಗುಡಿ ಇಡಲಿದೆ ಎಂದು ಬರೆಯಲಾಗಿದೆ.

ದೊಕ್ಲಾಮ್ ಬಳಿ ಚೀನಾ ರಸ್ತೆ ನಿರ್ಮಾಣಕ್ಕೆ ಭಾರತ ಸೇನೆ ತಡೆಯೊಡ್ಡಿದ ಬಳಿಕ ಕಳೆದ ಒಂದು ತಿಂಗಳಿಂದ ಭಾರತ ಮತ್ತು ಚೀನಾ ನಡುವೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಇದಾದ ಬಳಿಕ ಭಾರತವನ್ನ ಬೆದರಿಸುವ ಹಲವು ಲೇಖನಗಳನ್ನ ಗ್ಲೋಬಲ್ ಟೈಮ್ಸ್ ಪ್ರಕಟಿಸಿದೆ. ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ವಿವಾದವನ್ನ ಕೆಣಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ