ಭಾರತದ ಗಡಿಯೊಳಗೆ ಠಿಕಾಣಿ ಹೂಡಿರುವ ಚೀನಿ ಯೋಧರು

ಶನಿವಾರ, 20 ಸೆಪ್ಟಂಬರ್ 2014 (15:38 IST)
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ 1000ಕ್ಕೂ ಹೆಚ್ಚು ಯೋಧರು ಲಡಕ್‌ನ ಚುಮುರ್ ಪ್ರದೇಶವನ್ನು ಪ್ರವೇಶಿಸಿದ್ದು, ಭಾರತದ ಗಡಿಯೊಳಗೆ ಠಿಕಾಣಿ ಹೂಡಿದ್ದಾರೆ. ಚೀನಿಯರ ಅತಿಕ್ರಮಣ ಪ್ರತಿರೋಧಕ್ಕೆ   ಭಾರತ 1500 ಯೋಧರನ್ನು ಕಳಿಸಿದ್ದು ಗಡಿಯಲ್ಲಿ ಸಂಘರ್ಷದ ವಾತಾವರಣ ಎದುರಾಗಿದೆ.

ಉಭಯ ತಂಡಗಳ ನಡುವೆ ತಕ್ಷಣದ ಧ್ವಜ ವಂದನೆ ಸಭೆ ಯೋಜಿಸಿಲ್ಲ ಎಂದು ಅವು ತಿಳಿಸಿವೆ. ಭಾರತಕ್ಕೆ ಭೇಟಿ ನೀಡಿದ್ದ ಚೀನಾದ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಪಡೆಗಳನ್ನು ವಾಪಸು ಪಡೆಯುವುದಾಗಿ ಭರವಸೆ ನೀಡಿದ್ದರೂ ಚೀನಾದ ಪಡೆಗಳು ಇನ್ನೂ ಜಾಗ ಖಾಲಿ ಮಾಡಿಲ್ಲ.  ಪ್ರಧಾನ ಮಂತ್ರಿ ಮೋದಿ ಲಡಖ್‌ನಲ್ಲಿ ಚೀನಾದ ಅತಿಕ್ರಮಣದ ಪ್ರಸ್ತಾಪ ಮಾಡಿದಾಗ, ಅಧ್ಯಕ್ಷ ಕ್ಸಿ ಪಡೆಗಳನ್ನು ಹಿಂಪಡೆಯುವಂತೆ ತಾವು ಆದೇಶ ನೀಡಿದ್ದಾಗಿ ಹೇಳಿದ್ದರು.

ಒಂದು ವಾರದ ಹಿಂದೆ ಚುಮುರ್‌ಗೆ ಪ್ರವೇಶಿಸಿದ ಚೀನಾ ಯೋಧರು, ಭಾರೀ ನಿರ್ಮಾಣ ಸಾಮಗ್ರಿಗಳು ಮತ್ತು ಕಾರ್ಮಿಕ ಶಕ್ತಿಯನ್ನು ಗಡಿಯವರೆಗೆ ರಸ್ತೆ ನಿರ್ಮಾಣಕ್ಕಾಗಿ ತಂದಿದ್ದರು. 

ವೆಬ್ದುನಿಯಾವನ್ನು ಓದಿ