ಮೋದಿಯವ್ರೆ ಮತ್ತೊಮ್ಮೆ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ರೆ ಪರಿಣಾಮ ನೆಟ್ಟಗಿರಲ್ಲ: ಚೀನಾ ಎಚ್ಚರಿಕೆ

ಶುಕ್ರವಾರ, 27 ಫೆಬ್ರವರಿ 2015 (16:59 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ನೀಡಿದ ಭೇಟಿ ಕುರಿತಂತೆ ಚೀನಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೋದಿ ಮತ್ತೊಮ್ಮೆ ಭೇಟಿ ನೀಡಿದಲ್ಲಿ ಗಡಿ ವಿವಾದ ಮತ್ತಷ್ಟು ಉಲ್ಬಣವಾಗುತ್ತದೆ ಎಂದು ಚೀನಾ ಎಚ್ಚರಿಕೆಯ ಸಂದೇಶ ರವಾನಿಸಿದೆ.
 
ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಪ್ರದೇಶ ಎಂದು ಘೋಷಿಸಲಾಗಿದ್ದರಿಂದ ಅಲ್ಲಿ ನಡೆಯುವ ಜನಪರ ಕಾರ್ಯಕ್ರಮಗಳಿಗೆ ಪ್ರಧಾನಿಗಳು ಪಾಲ್ಗೊಳ್ಳುವುದು ಸಹಜವಾಗಿದೆ. ಆದರೆ, ಚೀನಾ ಪ್ರಧಾನಿ ಭೇಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 
 
ಕಳೆದ ವಾರ ಭಾರತ-ಚೀನಾ ಗಡಿ ವಿವಾದ ಕುರಿತಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಚೀನಾ ದೇಶಕ್ಕೆ ಭೇಟಿ ನೀಡಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದರು.   
 
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಬೆಂಬಲ ಪಡೆಯುವ ನಿರೀಕ್ಷೆಯಲ್ಲಿ ಭೇಟಿಯ ಉದ್ದೇಶವಾಗಿರಬಹುದು. ಅಥವಾ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರ್ಧಾರವೂ ಆಗಿರಬಹುದು. ಆದರೆ, ಭಾರತ-ಚೀನಾ ನಡುವಿನ ಗಡಿ ವಿವಾದ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿವೆ ಎನ್ನುವುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ. 
 

ವೆಬ್ದುನಿಯಾವನ್ನು ಓದಿ