ಏಕಕಾಲದಲ್ಲಿ 15 ಯುವತಿಯರೊಂದಿಗೆ ಡೇಟಿಂಗ್ ಮಾಡಿದ ಭೂಪ

ಗುರುವಾರ, 18 ಜೂನ್ 2015 (15:08 IST)
ಚೀನಾದ ಪ್ರತಿಷ್ಠಿತ ಎರಡು ಟಿಸಿಂಗುವಾ ಮತ್ತು ಪೆಕಿಂಗ್ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಐಷಾರಾಮಿ ಕಂಪೆನೆಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ 18 ವರ್ಷ ವಯಸ್ಸಿನ ಪುತ್ರಿಯ ತಂದೆಯಾದ ಟಿಯಾನ್, 15 ಯುವತಿಯರೊಂದಿಗೆ ಡೇಟಿಂಗ್‌ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ.  
 
41 ವರ್ಷ ವಯಸ್ಸಿನ ಟಿಯಾನ್ ಸುಮಾರು 15 ಯುವತಿಯರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ನಡೆಸಿದ್ದಾನೆ. ಆದರೆ ಅದರಲ್ಲಿ ಒಬ್ಬಳು ಯುವತಿ ಆತನ ವಿರುದ್ಧ ವಂಚನೆ ದೂರು ನೀಡಿ 6 ಸಾವಿರ ಡಾಲರ್ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾಳೆ. 
 
ಆರೋಪಿ ಟಿಯಾನ್ ಆನ್‌ಲೈನ್ ಮೂಲಕ 15 ಯುವತಿಯರನ್ನು ಪರಿಚಯಿಸಿಕೊಂಡಿದ್ದು ಲವ್ವಿ ಡವ್ವಿ ನಡೆಸುತ್ತಿದ್ದ ಎಂದು ಚೀನಾ ಡೈಲಿ ವರದಿ ಮಾಡಿದೆ. ಆತನ ಡೇಟಿಂಗ್ ದೃಶ್ಯಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.  
 

ವೆಬ್ದುನಿಯಾವನ್ನು ಓದಿ